ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ಸಂದರ್ಭದಲ್ಲಿ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್‌ ಅಭಿಮಾನಿ!

(ನ್ಯೂಸ್‌ ಕಡಬ) newskadaba.com,  ಅ.04 : ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22ರಂದು ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದರ ವಿರುದ್ಧ ಶತ್ರು ದೇಶದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಮೇ.7 ರಂದು ಆಪರೇಷನ್‌ ಸಿಂಧೂರ ಎನ್ನುವ ಕಾರ್ಯಾಚರಣೆ ನಡೆಸಿ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿನ 9 ಉಗ್ರರ ನೆಲೆಗಳನ್ನು ಸಂಪೂರ್ಣ ನಾಶಗೊಳಿಸಿತ್ತು.

ಈ ಘಟನೆ ನಂತರ ಉಭಯ ದೇಶಗಳ ನಡುವೆ ವಿಷಮ ಸ್ಥಿತಿ ಇದೆ. ಹೀಗಿರುವಾಗಲೂ ಪಾಕಿಸ್ತಾನದ ಕುಟಂಬವೊಂದು ಭಾರತೀಯ ರಾಷ್ಟ್ರಗೀತೆ ಹಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.ರವಿವಾರ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿತ್ತು. ಭಾರತ ತಂಡದ ಅಭಿಮಾನಿಯಾಗಿರುವ ಪಾಕಿಸ್ತಾನ ಕುಟುಂಬವೊಂದು ಪಾಕಿಸ್ತಾನದ ಜೆರ್ಸಿ ತೊಟ್ಟು ಭಾರತೀಯ ರಾಷ್ಟ್ರಗೀತೆ ಹಾಡುವ ಮೂಲಕ ತಂಡಕ್ಕೆ ಬೆಂಬಲಿಸಿದ್ದಾರೆ. ಅಲ್ಲದೆ ಭಾರತ ವಿಶ್ವಕಪ್‌ ಗೆದ್ದ ಬಳಿಕ ಸಂಭ್ರಮಿಸಿದ್ದಾರೆ.

ಸದ್ಯ ವೈರಲ್‌ ಆಗುತ್ತಿರುವ ವಿಡಿಯೊದಲ್ಲಿ ಇಬ್ಬರು ಪುರುಷರು ಮತ್ತು ಸಣ್ಣ ಬಾಲಕಿಯೊಬ್ಬಳು ಪಾಕ್‌ ಜೆರ್ಸಿತೊಟ್ಟು ಟಿವಿ ಮುಂದೆ ನಿಂತು ಭಾರತದ ರಾಷ್ಟ್ರಗೀತೆ ಹಾಡುತ್ತಿರುವುದನ್ನು ಕಾಣಬಹುದು. ಬಳಿಕ ಹರ್ಮನ್‌ಪ್ರೀತ್‌ ಕೌರ್‌ ವಿಶ್ವಕಪ್‌ ಟ್ರೋಫಿ ಸ್ವೀಕರಿಸುವಾಗ ಸಂಭ್ರಮಿಸುವುದನ್ನು ಕಾಣಬಹುದು.

Scroll to Top