(ನ್ಯೂಸ್ ಕಡಬ) newskadaba.com, ನ.03: ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 20 ಜನರು ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ತೆಲಂಗಾಣಾದ ರಂಗಾ ರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿ ನಡೆದಿದೆ.
ಟಿಪ್ಪರ್ ತೆಲಂಗಾಣ ರಸ್ತೆ ಸಾರಿಗೆ ನಿಗಮ (ಆರ್ಟಿಸಿ) ವಾಹನಕ್ಕೆ ಡಿಕ್ಕಿ ಹೊಡೆದ ಡಿಕ್ಕಿ ರಭಸಕ್ಕೆ ಬಸ್ ಬಸ್ ಒಳಗೆ ಜಲ್ಲಿಕಲ್ಲು ಬಿದ್ದಿದ್ದು ಸ್ಥಳದಲ್ಲೇ 16 ಜನರು ಸಾವನ್ನಪ್ಪಿದರು, ಎಂಟು ಮಂದಿ ಗಾಯಗೊಂಡರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.














