ನಾಳೆಯಿಂದ ʼಕಾಂತಾರ ಚಾಪ್ಟರ್ 1′ ಟಿಕೆಟ್ ಬೆಲೆಯಲ್ಲಿ ಭಾರಿ ಇಳಿಕೆ

(ನ್ಯೂಸ್ಕಡಬ) newskadaba.com,  ..30: ಬೆಂಗಳೂರು: ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿರುವ ‘ಕಾಂತಾರ ಚಾಪ್ಟರ್ 1’  ಚಿತ್ರ ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ಕಿಂಗ್‌ ಎನಿಸಿಕೊಂಡಿದೆ. ಹಲವು ದಾಖಲೆಗಳನ್ನು ಬರೆದು, ಭಾರತದಾದ್ಯಂತ ತನ್ನ ಅಬ್ಬರವನ್ನು ಮುಂದುವರಿಸಿದೆ. ಅಕ್ಟೋಬರ್‌ 2ರಂದು ತೆರೆಕಂಡ ಈ ಚಿತ್ರ ಬರೀ ಕರ್ನಾಟಕದಲ್ಲಿಯೇ 250 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಅಲ್ಲದೆ ಜಾಗತಿಕವಾಗಿ 850 ಕೋಟಿ ರೂ. ದೋಚಿಕೊಂಡು ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತೀಯ ಸಿನಿಮಾ ಎನಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದೀಗ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್‌ ವಿಶೇಷ ಕೊಡುಗೆ ಘೋಷಿಸಿದೆ.

‘ಕಾಂತಾರ ಚಾಪ್ಟರ್ 1’ ಸಿನಿಮಾದ ಟಿಕೆಟ್ ದರಗಳನ್ನು ಗಣನೀಯವಾಗಿ ಇಳಿಸಲಾಗಿದೆ. ಅಕ್ಟೋಬರ್ 31ರಿಂದ ಇದು ಜಾರಿಗೆ ಬರಲಿದೆ. ಅದರಂತೆ ಸಿಂಗಲ್ ಸ್ಕ್ರೀನ್‌ನ ಟಿಕೆಟ್‌ ದರ 99 ರೂ. ಮತ್ತು ಮಲ್ಟಿಪ್ಲೆಕ್ಸ್‌ ಟಿಕೆಟ್‌ ದರ 150 ರೂ. ನಿಗದಿಪಡಿಸಲಾಗಿದೆ.

Scroll to Top