(ನ್ಯೂಸ್ ಕಡಬ) newskadaba.com, ಅ.29 ಸಂಡೂರು: ಇಂದು ವಿದ್ಯಾರ್ಥಿಗಳು ದೈಹಿಕ ಚಟುವಟಿಕೆ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಅಲ್ಲದೆ ಸಣ್ಣ ವಯಸ್ಸಿನಲ್ಲಿಯೇ ಬಿ.ಪಿ. ಸುಗರ್ ಬರುವಂತಹ ದುಸ್ಥಿತಿಯನ್ನು ತಡೆಯುವುದು ಪ್ರತಿಯೊಬ್ಬರ ಅದ್ಯ ಕರ್ತವ್ಯವಾಗಿದೆ ಎಂದು ಸಂಸದ ಈ.ತುಕರಾಂ ತಿಳಿಸಿದರು.
ಅವರು ತಾಲೂಕಿನ ಯರದಮ್ಮನಹಳ್ಳಿ ಗ್ರಾಮದಲ್ಲಿ ಎನ್.ಎಂ.ಡಿ.ಸಿ. ಸಿ.ಎಸ್.ಅರ್ ಅನುದಾನದಲ್ಲಿ ತಾಲೂಕಿನ 25 ಶಾಲೆಗಳಿಗೆ ಪ್ರತಿ 1 ಲಕ್ಷದಂತೆ 25 ಲಕ್ಷ ಮೊತ್ತದ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿ ಎಲ್ಲಿ ದೈಹಿಕ ಕಸರತ್ತು ಇರುತ್ತದೆಯೋ ಅಲ್ಲಿ ಬುದ್ದಿಯೂ ಸಹ ಬೆಳವಣಿಗೆಯಾಗುತ್ತದೆ, ಅದ್ದರಿಂದ ಪ್ರತಿಯೊಂದು ಮಗವೂ ಸಹ ಕ್ರೀಡೆಗಳಲ್ಲಿ ಭಾಗಿಯಾಗಬೇಕು, ಇದರಿಂದ ಚಟುವಟಿಕೆಯಿಂದ ಕೂಡಿರಲು ಸಾಧ್ಯ, ಅನಾರೋಗ್ಯದಿಂದ ದೂರವಾಗಲು ಸಹ ಸಹಕಾರಿಯಾಗಿದೆ, ಅದ್ದರಿಂದ ಪಾಲಕರು ಎಲ್ಲಾ ಮಕ್ಕಳನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಅದಕ್ಕೆ ಶಿಕ್ಷಕರೂ ಸಹ ಪೂರ್ಣಪ್ರಮಾಣದಲ್ಲಿ ಸಹಕರಿಸಬೇಕು ಎಂದರು.
ಮಕ್ಕಳಿಗೆ ಬೇಕಾದ ಕೊಠಡಿಗಳು, ಕ್ರೀಡಾ ಸಾಮಾಗ್ರಿಗಳು, ಪ್ರಯೋಗಾಲಯಗಳು, ಗ್ರಂಥಾಲಯದ ವ್ಯವಸ್ಥೆ, ಕಂಪ್ಯೂಟರ್ ಶಿಕ್ಷಣದ ವ್ಯವಸ್ಥೆ ಮಾಡಿದ್ದು ಅವುಗಳ ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಪ್ರಗತಿಯನ್ನು ಸಾಧಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿ ಎಂದರು.
ವಿದ್ಯಾರ್ಥಿಗಳು ಕಡ್ಡಾಯವಾಗಿ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಕರೆ














