ಮೆರಿಟ್‌ ಪಡೆದ 500 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನಿಸಿದ ಅಶೋಕ ವಿಶ್ವವಿದ್ಯಾಲಯ

(ನ್ಯೂಸ್‌ ಕಡಬ) newskadaba.com,  ಅ.29 ಬೆಂಗಳೂರು: ಪ್ರತಿಭಾನ್ವಿತ 500 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಸಹಿತ ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಳ್ಳುವ ಅವಕಾಶವನ್ನು ಅಶೋಕ ವಿಶ್ವವಿದ್ಯಾಲಯದ ನೀಡಿದೆ.ಹೌದು, ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಅಶೋಕ ವಿಶ್ವವಿದ್ಯಾಲಯವು ತನ್ನ ಮುಂದಿನ ಶೈಕ್ಷಣಿಕ ವರ್ಷದ ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಅಕ್ಟೋಬರ್‌ ತಿಂಗಳಿನಿಂದ ಆರಂಬಿಸಿದ್ದು, ಮೆರಿಟ್‌ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಹಿತ ಪ್ರವೇಶ ಪಡೆದುಕೊಳ್ಳಬಹುದು.

ಕೇವಲ ಅಂಕದಲ್ಲಷ್ಟೇ ಅಲ್ಲದೆ, ಇತರೆ ವಿಭಾಗದಲ್ಲಿ ಮೆರಿಟ್‌ ಪಡೆದ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನದ ಸೌಲಭ್ಯ ಸಿಗಲಿದೆ.ಅಂಕಗಳಲ್ಲಿ ಮೆರಿಟ್‌ ಪಡೆದ 200 ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆದುಕೊಳ್ಳುವ ಅರ್ಹತೆ ಪಡೆದುಕೊಳ್ಳಲಿದ್ದಾರೆ.

ವಿಶೇಷ ಮೆರಿಟ್ ಅಂದರೆ, ಜೆಇಇ, ಐಐಎಸ್ಇಆರ್ (ಐಎಟಿ), ಸಿಎಂಐ ಮತ್ತು ಭಾರತೀಯ ರಾಷ್ಟ್ರೀಯ ಒಲಿಂಪಿಯಾಡ್ಸ್ (ಐಎನ್ಒ) ನಲ್ಲಿ ಅಸಾಧಾರಣ ಸಾಧನೆ ಮಾಡಿದ 50 ಮಕ್ಕಳಿಗೆ ಶೇ.100ರಷ್ಟು ಬೋಧನಾ ಶುಲ್ಕ ಮನ್ನಾ ಮಾಡಲಾಗುತ್ತಿದೆ. ಜೊತೆಗೆ, ರಾಷ್ಟ್ರೀಯ ಆಪ್ಟಿಟ್ಯೂಡ್ ಪರೀಕ್ಷೆಗಳಲ್ಲಿ 2000ರ ರಾಂಕ್ ಪಡೆದ 50 ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನದಿಂದ ಪ್ರಯೋಜನ ಪಡೆಯುತ್ತಾರೆ

Scroll to Top