ಗ್ರೀನ್ ಹೋಗಿ ಪಿಂಕ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಪಾಕ್ ಆಟಗಾರರು

(ನ್ಯೂಸ್‌ ಕಡಬ) newskadaba.com,  ಅ..24: ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವಣ ಟಿ೨೦ ಸರಣಿಯು ಇಂದಿನಿಂದ ಪ್ರಾರಂಭವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್‌ನಲ್ಲಿ ಪಾಕಿಸ್ತಾನ್ ತಂಡವು ಪಿಂಕ್ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ.

ಸಾಮಾನ್ಯವಾಗಿ ಗ್ರೀನ್ ಜೆರ್ಸಿ ಧರಿಸುವ ಪಾಕ್ ಪಡೆ ಈ ಬಾರಿ ಗುಲಾಬಿ ಬಣ್ಣದೊಂದಿಗೆ ಕಾಣಿಸಿಕೊಳ್ಳಲು ಮುಖ್ಯ ಕಾರಣ #PINKtober ಅಭಿಯಾನ. ಅಂದರೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪಾಕಿಸ್ತಾನ್ ಆಟಗಾರರು ತನ್ನ ಜೆರ್ಸಿ ಬಣ್ಣ ಬದಲಿಸಿದೆ.

#PINKtober ಅಭಿಯಾನದ ಭಾಗವಾಗಿ, ಪಾಕಿಸ್ತಾನ್ ತಂಡದ ಆಟಗಾರರು ವಿಶೇಷವಾಗಿ ವಿನ್ಯಾಸಗೊಳಿಸಲಾದ ಗುಲಾಬಿ ಬಣ್ಣದ ಜೆರ್ಸಿಗಳನ್ನು ಧರಿಸಲಿದ್ದಾರೆ. ಸೌತ್ ಆಫ್ರಿಕಾದ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಗುಲಾಬಿ ಬಣ್ಣದ ರಿಬ್ಬನ್‌ಗಳನ್ನು ಧರಿಸಲಿದ್ದಾರೆ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ.

Scroll to Top