ಮೈಸೂರು: ಗ್ಯಾಸ್‌ ಗೀಸರ್‌ ಸೋರಿಕೆಯಾಗಿ ಅಕ್ಕ- ತಂಗಿ ಉಸಿರುಗಟ್ಟಿ ಮೃತ್ಯು

(ನ್ಯೂಸ್‌ ಕಡಬ) newskadaba.com,  ಅ.25 ಮೈಸೂರು : ಮೈಸೂರಿನಲ್ಲಿ ಘೋರವಾದ ದುರಂತವೊಂದು ಸಂಭವಿಸಿದೆ. ಸ್ನಾನಕ್ಕೆ ತೆರಳಿದ್ದಾಗ ಗ್ಯಾಸ್ ಗೀಸರ್ ಲೀಕ್) ಆಗಿ ಅಕ್ಕ ಮತ್ತು ತಂಗಿ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಬೆಟ್ಟದಪುರ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಗುಲ್ಫಾರ್ಮ್ (23) ಮತ್ತು ಸಿಮ್ರಾನ್ ತಾಜ್ (20) ಎಂದು ಗುರುತಿಸಲಾಗಿದೆ.

ಅಕ್ಕ-ತಂಗಿಯರಾದ ಗುಲ್ಫಾರ್ಮ್, ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಸ್ನಾನ ಮಾಡಲು ಹೋಗಿದ್ದಾರೆ. ಆದರೆ ಸ್ನಾನಕ್ಕೆ ಹೋದವರು ಬಹಳ ಸಮಯವಾದರೂ ಹೊರಗೆ ಬಂದಿರಲಿಲ್ಲ.

ಇದರಿಂದ ಅನುಮಾನಗೊಂಡ ತಂದೆ ಅಲ್ತಾಫ್‌ ಬಾಗಿಲು ಬಡಿದಿದ್ದಾರೆ. ಆಗಲೂ ಬಾಗಿಲು ತೆಗೆದಿಲ್ಲ. ತೆರೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿರೋದು ಕಂಡು ಶಾಕ್ ಆಗಿದ್ದಾರೆ. ತಕ್ಷಣ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದರು.

 

Scroll to Top