ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ತೇರ್ಗಡೆಗೆ ಕನಿಷ್ಠ ಅಂಕ ೩೩ಕ್ಕೆ ಇಳಿಕೆ ಸರಿಯಲ್ಲ : ಶಿಕ್ಷಣ ಸಚಿವ ಎಂ.ಸಿ.ಸುಧಾಕರ್



(ನ್ಯೂಸ್ಕಡಬ) newskadaba.com,  .20 ಉಡುಪಿ-ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ತೇರ್ಗಡೆಗೆ ಕನಿಷ್ಠ ಅಂಕ ೩೩ಕ್ಕೆ ಇಳಿಕೆ ಮಾಡಿರುವ ಶಾಲಾ ಶಿಕ್ಷಣ ಮಂತ್ರಿಗಳ ಈ ನಿರ್ಧಾರದ ಬಗ್ಗೆ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿಗಳು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ೩೫ ಅಂಕ ಇರುವುದನ್ನು ೩೩ಕ್ಕೆ ಇಳಿಸಿದ್ದಾರೆ ಈ ಬಗ್ಗೆ ಇನ್ನಷ್ಟು ಚರ್ಚೆಗಳು ಆಗಬೇಕು ಎಂಬ ಅಭಿಪ್ರಾಯವಿದೆ. ಶಾಲಾ ಶಿಕ್ಷಣ ಮಂತ್ರಿಗಳು ಯಾವ ಉದ್ದೇಶ ಇಟ್ಟುಕೊಂಡು ಇದನ್ನು ಮಾಡಿದ್ದಾರೆ ಎಂಬ ಮಾಹಿತಿ ಇಲ್ಲ. ಈ ರೀತಿ ಅಂಕ ಕಡಿಮೆ ಮಾಡಿರುವುದು ಸರಿಯಲ್ಲ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಈ ಬಗ್ಗೆ ಸರಿಯಾದ ಅಧ್ಯಯನ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದ್ದಾರೆ,





ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ರಾಜ್ಯಗಳಲ್ಲಿ ಆರೆಸ್ಸೆಸ್ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲ ಜಾತಿ ಧರ್ಮದ ಜನ ಇರುತ್ತಾರೆ. ಕೆಲವು ಕಾರ್ಯ ಚಟುವಟಿಕೆಗಳಿಗೆ ವಿರೋಧ ಬರುವ ಸಾಧ್ಯತೆ ಇದೆ .ಕಾಂಗ್ರೆಸ್ ಸರಕಾರ ಈ ಸಮೀಕ್ಷೆ ಮಾಡುತ್ತಿದೆ ಎಂದು ಅವರ ವಿರೋಧವೇ? ಮುಂದಿನ ವರ್ಷ ಕೇಂದ್ರ ಸರಕಾರ ನೇರವಾಗಿ ಜಾತಿ ಗಣತಿ ಮಾಡುತ್ತದೆ.






ಆಗಲು ಇವರು ವಿರೋಧ ವ್ಯಕ್ತಪಡಿಸುತ್ತಾರೆಯೇ? ಬಹಳಷ್ಟು ಜನ ನಿಮ್ಮ ಕಡೆ ನೋಡುತ್ತಿದ್ದಾರೆ. ನಿಮ್ಮ ಸೂಚನೆ, ಅನುಭವಗಳು ಏನು ಅಂತ ಯುವ ಸಮೂಹ ನಿಮ್ಮ ಕಡೆ ನೋಡುತ್ತಿದೆ. ಈ ವಿಚಾರದಲ್ಲಿ ಬಹಳ ಯೋಚನೆ ಮಾಡಿ ಹೇಳಿಕೆ ನೀಡಿದರೆ ಉತ್ತಮ ಎಂದು ಅವರು ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರಲ್ಲಿ ವಿನಂತಿ ಮಾಡಿದರು

error: Content is protected !!
Scroll to Top