ದೀಪಾವಳಿ ಹಬ್ಬದ ದಿನವೇ ‘ಜಿಟಿ ಮಾಲ್’ ನಿಂದ ಬಿದ್ದು ತರುಣ ಆತ್ಮಹತ್ಯೆ!

(ನ್ಯೂಸ್‌ ಕಡಬ) newskadaba.com,  ಅ.20 ಬೆಂಗಳೂರು: ನಾಡಿನಾದ್ಯಂತ ಇಂದು ದೀಪಾವಳಿ ಹಬ್ಬದ ಸಡಗರ, ಸಂಭ್ರಮ ಮನೆಮಾಡಿರುವಂತೆಯೇ ನಗರದ ಪ್ರತಿಷ್ಠಿತ ಮಾಲ್ ಗಳಲ್ಲಿ ಒಂದಾದ ಮಾಗಡಿ ರಸ್ತೆಯ ಜಿಟಿ ಮಾಲ್ ನಿಂದ ಬಿದ್ದು ಯುವಕನೋರ್ವ ಮೃತಪಟ್ಟಿದ್ದಾನೆ.

GTವರ್ಲ್ಡ್ ಮಾಲ್ ನ ಮೂರನೇ ಅಂತಸ್ಥಿನಿಂದ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಮಾಗಡಿ ರಸ್ತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…

Scroll to Top