(ನ್ಯೂಸ್ ಕಡಬ) newskadaba.com ಮಂಗಳೂರು, ಎ.26. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ| ಡಿ. ವೀರೇಂದ್ರ ಹೆಗ್ಡೆಯವರ 50 ನೇ ಪಟ್ಟಾಭಿಷೇಕದ ಸವಿನೆನಪಿಗಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು ಸೇರಿ ನಿರ್ಮಾಣ ಮಾಡಿರುವ ಚಲನಚಿತ್ರ ‘ಕಾನೂರಾಯಣ’ ಬಿಡುಗಡೆಗೆ ಸಿದ್ಧವಾಗಿದೆ.
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ 20 ಲಕ್ಷ ಮಂದಿ ಹಣ ಹಾಕಿ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು ದಾಖಲೆ ನಿರ್ಮಿಸಲು ಸಜ್ಜಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ 20 ಲಕ್ಷ ಸದಸ್ಯರು ಸೇರಿ ನಿರ್ಮಿಸಿರುವ ಈ ಚಲನಚಿತ್ರದ ನಿರ್ಮಾಣ ಕಾರ್ಯವು ಪೂರ್ಣಗೊಂಡಿದ್ದು, ಎಪ್ರಿಲ್ 27 ರಂದು ಬಿಡುಗಡೆಗೊಳ್ಳಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶಯಗಳನ್ನೊಳಗೊಂಡು ಗ್ರಾಮೀಣ ಪ್ರದೇಶದಲ್ಲಿ ಎದುರಿಸುವ ಸವಾಲುಗಳನ್ನು ಮುಂದಿಟ್ಟುಕೊಂಡು ಚಿತ್ರ ನಿರ್ಮಿಸಲಾಗಿದೆ.
ಟಿ.ಎಸ್. ನಾಗಾಭರಣರವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಡಾ.ಎಲ್.ಹೆಚ್. ಮಂಜುನಾಥ್ ಹಾಗೂ ಹರೀಶ್ ಹಾಗಲವಾಡಿ ಕಥೆ – ಸಂಭಾಷಣೆ ತಯಾರಿಸಿದ್ದಾರೆ. ಚಿತ್ರಕಥೆಯ ಸಹ ನಿರ್ದೇಶನದಲ್ಲಿ ಪನ್ನಗ ಭರಣರವರು ತನ್ನ ಕೈಚಳಕವನ್ನು ತೋರಿಸಿದ್ದು, ಮುಖ್ಯಭೂಮಿಕೆಯಲ್ಲಿ ರಾಧಾರಮಣ ಖ್ಯಾತಿಯ ಸ್ಕಂದ ಅಶೋಕ್, ಸೋನು ಗೌಡ, ದೊಡ್ಡಣ್ಣ, ನೀನಾಸಂ ಅಶ್ವತ್, ಕಡ್ಡಿಪುಡಿ ಚಂದ್ರು ನಟಿಸಿದ್ದಾರೆ.