ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯ ತರಬೇತಿ

(ನ್ಯೂಸ್‌ ಕಡಬ) newskadaba.com ಅ.16. ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ.)ಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಅಭ್ಯರ್ಥಿಗಳಿಗೆ ಸಿಸ್ಕೊ ಸರ್ಟಿಫೈಡ್ ನೆಟ್‍ವರ್ಕ್ ಅಸೋಸಿಯೇಟ್ (ಸಿ.ಸಿ.ಎನ್.ಎ), ಸಿಸ್ಕೊ ಐ.ಟಿ. ಎಸೆನ್ಸಿಯಲ್ಸ್, ಬೇಸಿಕ್ ವೆಲ್ಡಿಂಗ್, ಟಿಗ್ ವೆಲ್ಡಿಂಗ್, ಮಿಗ್ ವೆಲ್ಡಿಂಗ್, ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್ ಹಾಗೂ ಟ್ಯಾಲಿ ಪ್ರೈಮ್ ಅಲ್ಪಾವಧಿ ಕೋರ್ಸ್‍ಗಳಲ್ಲಿ ಉಚಿತ ಕೌಶಲ್ಯ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ನಗರದ ಕದ್ರಿ ಹಿಲ್ಸ್‍ ನಲ್ಲಿರುವ ಮಹಿಳಾ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಜಿಟಿಟಿಐ ಕಛೇರಿಯಿಂದ ಅರ್ಜಿಯನ್ನು ಪಡೆದು ಕೌಶಲ್ಯ ತರಬೇತಿಗೆ ಹೆಸರು ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0824-221147, 8277741731 ಸಂಪರ್ಕಿಸಬಹುದು ಎಂದು ಕೆ.ಜಿ.ಟಿ.ಟಿ.ಐ. ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top