ಕಂದಾಯ ಇಲಾಖೆಯಲ್ಲಿ 500 ಹುದ್ದೆಗಳು- ಅರ್ಜಿ ಆಹ್ವಾನ



(ನ್ಯೂಸ್‌ ಕಡಬ) newskadaba.com  ಅ. 15. ಉದ್ಯೋಗಾಕಾಂಕ್ಷಿಗಳಿಗೆ ಇದೀಗ ರಾಜ್ಯ ಸರಕಾರ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಕಂದಾಯ ಇಲಾಖೆಯಲ್ಲಿ ಖಾಲಿಯಿರುವ ಐನೂರು ಹುದ್ದೆಗಳ ಬರ್ತಿಗೆ ಇದೀಗ ಅರ್ಜಿಯನ್ನು ಆಹ್ವಾನ ಆಹ್ವಾನಿಸಿದೆ.





 

ಹೌದು, ಕಂದಾಯ ಇಲಾಖೆಯಲ್ಲಿ 500 ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಯಿದ್ದು, ಈ  ಗ್ರಾಮ ಲೆಕ್ಕಿಗ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕನಿಷ್ಠ ವಿದ್ಯಾರ್ಹತೆ ಮುಗಿಸಿದವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗ ನೇಮಕಾತಿ ಹೆಚ್ಚಿನ ವಿವರ, ವಯೋಮಿತಿ, ಅರ್ಹತೆ, ಪ್ರಮುಖ ದಿನಾಂಕಗಳ ವಿವರ ಇಲ್ಲಿದೆ.






 

ವಿದ್ಯಾರ್ಹತೆ:

ಕಂದಾಯ ಇಲಾಖೆಯ ನೇಮಕಾತಿಗೆ ಒಳಪಡುವ ಅಭ್ಯರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣವಾಗಿರಬೇಕು. ಈ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು ಎಂದು ಅಧಿಸೂಚನೆಯಲ್ಲಿ ಇಲಾಖೆ ತಿಳಿಸಿದೆ.

 

ವಯೋಮಿತಿ: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ 18 ವಯಸ್ಸು ಮತ್ತು ಗರಿಷ್ಠ 38 ವಯಸ್ಸು ಇರಬೇಕು. ಜಾತಿ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳ ವಯೋಮಿತಿಯಲ್ಲಿ ಸಡಿಲಿಕೆ ಸಿಗುತ್ತದೆ. 2ಎ 2ಬಿ 3ಎ 3ಬಿ ವರ್ಗ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋ ಸಡಿಲಿಕೆ ಸಿಗಲಿದೆ ಎಂದು ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

 

ಪರೀಕ್ಷಾ ವಿಧಾನ: ಅಭ್ಯರ್ಥಿಗಳಿಗೆ 200 ಅಂಕಗಳ 2 ಲಿಖಿತ ಪರೀಕ್ಷೆ ಇರುತ್ತದೆ. ಇದರೊಂದಿಗೆ ಒಂದು ಕಡ್ಡಾಯ ಕನ್ನಡ ಪತ್ರಿಕೆ ಸಹ ಇರುತ್ತದೆ. ಋಣಾತ್ಮಕ ಅಂಕಗಳು ಇರುತ್ತವೆ.

 

ಅರ್ಜಿ ಸಲ್ಲಿಕೆ ವಿಧಾನ

ಅಭ್ಯರ್ಥಿಗಳು ಮೊದಲು ಕಂದಾಯ ಇಲಾಖೆಯ ಅಧಿಕೃತ ವೆಬ್‌ ಸೈಟ್‌  https://kandaya.karnataka.gov.in/en ಗೆ ಭೇಟಿ ನೀಡಬೇಕು. ಅಲ್ಲಿ ತೆರೆದುಕೊಳ್ಳುವ ಪರದೆಯಲ್ಲಿ ನಿಮಗೆ ಅಗತ್ಯವಾದ Karnataka Revenue Department ವಿಭಾಗ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಸಿಗುವ ಅಧಿಸೂಚನೆ ಪರಿಶೀಲಿಸಿ ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು. ನಂತರ ಆನ್ಲೈನ್ ಲಿಂಕ್ ಮೂಲಕ ಅರ್ಜಿ ನಮೂನೆ ಕ್ಲಿಕ್ ಮಾಡಿ. ಅಲ್ಲಿ ಕೇಳಲಾಗುವ ಎಲ್ಲ ಅಗತ್ಯ ವಿವರ ನಮೂದಿಸಿ. ಶುಲ್ಕ ಪಾವತಿ ಮಾಡುವ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಭವಿಷ್ಯದ ಉಪಯೋಗಕ್ಕಾಗಿ ಅರ್ಜಿಯ ಒಂದು ಪ್ರತಿ ಡೌನ್‌ ಲೋಡ್ ಮಾಡಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.

error: Content is protected !!
Scroll to Top