(ನ್ಯೂಸ್ ಕಡಬ) newskadaba.com, ಅ.15 ಧಾರವಾಡ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಧಾರವಾಡದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಸಂಶೋಧನೆ ಮತ್ತು ತಂತ್ರಜ್ಞಾನ ಇನ್‌ಕ್ಯುಬೇಟರ್ (ಧಾರಿ) ಸಹಯೋಗದೊಂದಿಗೆ ನಿರ್ಮಾಣವಾಗಿರುವ ಬಯೋನೆಸ್ಟ್ ಇನ್‌ಕ್ಯುಬೇಷನ್ ಸೆಂಟರ್ (ಬಿಐಸಿ) ಉದ್ಘಾಟಿಸಿದರು.
ಐಐಟಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ, ಸೀತಾರಾಮನ್ ಸರ್ಕಾರವು ಸುಸ್ಥಿರ ಹಸಿರು ಮಾದರಿಗಳ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದರು. ನೈಸರ್ಗಿಕ ಅನಿಲಗಳ ಬೆಲೆ ಏರಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳಿಗೆ ಸರ್ಕಾರ ಆದ್ಯತೆ ನೀಡಿದೆ.
ಸರ್ಕಾರ ಹಲವು ಹಸಿರು ಯೋಜನೆಗಳನ್ನು (ಗ್ರೀನ್ ಬಾಂಡ್…) ಜಾರಿಗೊಳಿಸಿದೆ. ಸುಸ್ಥಿರ ಶಕ್ತಿ ಸಂಪನ್ಮೂಲ ನಿಟ್ಟಿನಲ್ಲಿ ಬಹಳಷ್ಟು ಸವಾಲುಗಳು ಇವೆ. ಸರ್ಕಾರ ಮತ್ತು ಖಾಸಗಿ ಎರಡೂ ಕ್ಷೇತ್ರದವರು ಭಾರತವನ್ನು ಸುಸ್ಥಿರ ಹಸಿರು ಮಾದರಿಯಾಗಿಸುವ ಕಡೆಗೆ ಹೆಜ್ಜೆ ಇಡುತ್ತಿವೆ’ ಎಂದು ಹೇಳಿದರು.
ನೈಸರ್ಗಿಕ ಅನಿಲಗಳ ಬೆಲೆ ಏರಿಕೆಯನ್ನು ಉಲ್ಲೇಖಿಸಿ ಹಲವಾರು ದೇಶಗಳು ಕಲ್ಲಿದ್ದಲಿನ ಮೇಲೆ ಹಿಂದೆ ಸರಿಯುತ್ತಿವೆ. ಆದರೂ ಸರ್ಕಾರವು 2047 ರ ವೇಳೆಗೆ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ದೃಢನಿಶ್ಚಯ ಹೊಂದಿದೆ ಎಂದು ಹಣಕಾಸು ಸಚಿವ ಹೇಳಿದರು.













