(ನ್ಯೂಸ್ ಕಡಬ) newskadaba.com ಅ. 15. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಖಾಲಿ ಇರುವ 3 ಉಪ ಮುಖ್ಯ ಕಾನೂನು ನೆರವು ಅಭಿರಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಕನಿಷ್ಠ 7 ವರ್ಷಗಳ ಕಾಲ ಕ್ರಿಮಿನಲ್ ಕಾನೂನಿನಲ್ಲಿ ಅಭ್ಯಾಸ ಮಾಡಿರಬೇಕು. ಕ್ರಿಮಿನಲ್ ಕಾನೂನಿನ ಬಗ್ಗೆ ಪರಿಪೂರ್ಣ ಜ್ಞಾನವನ್ನು ಹೊಂದಿರಬೇಕು. ಮಾತುಗಾರಿಕೆ, ಬರವಣಿಗೆ ಮತ್ತು ಸಂವಹನ ಕೌಶಲ್ಯವನ್ನು ಹೊಂದಿರಬೇಕು. ಕಾನೂನು ಸಂಶೋಧಾನಾ ಕೌಶಲ್ಯವನ್ನು ಹೊಂದಿರಬೇಕು. ಕಾನೂನು ಅಭಿರಕ್ಷಕರ ನೈತಿಕ ಕರ್ತವ್ಯಗಳ ಸಂಪೂರ್ಣ ತಿಳುವಳಿಕೆಯನ್ನು ಹೊಂದಿರಬೇಕು. ಇತರರೊಂದಿಗೆ ಪರಿಣಾಮಕಾರಿಯಾಗಿ ಹಾಗೂ ಸಮರ್ಥವಾಗಿ ಕೆಲಸಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು. ಸೆಷನ್ಸ್ ನ್ಯಾಯಾಲಯದಲ್ಲಿ ಕನಿಷ್ಥ 20 ಕ್ರಿಮಿನಲ್ ವಿಚಾರಣೆಯನ್ನು ನಿರ್ವಹಿಸಿರಬೇಕು. ಕಾರ್ಯನಿರ್ವಾಹಕ ಅಧ್ಯಕ್ಷರು ಕ.ರಾ.ಕಾ.ಸೇ.ಪ್ರಾಧಿಕಾರ ಇವರು ಅಸಾಧಾರಣ ಸಂದರ್ಭಗಳಲ್ಲಿ ಈ ಶರತ್ತನ್ನು ಸಡಿಲಿಸಬಹುದಾಗಿದೆ. ಐ.ಟಿ ಜ್ಞಾನವನ್ನು ಹೊಂದಿರಬೇಕು.
ವೇತನ ರೂ. 40,000 ದಿಂದ ರೂ.60,000 ವರೆಗೆ. (ನಗರಗಳ ಜನಸಂಖ್ಯಾ ಆಧಾರದ ಮೇರೆಗೆ ಅವಲಂಬಿತವಾರುತ್ತದೆ.) ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನ. ನೇಮಕಾತಿ ಪ್ರಕ್ರಿಯೆ ಸಂದರ್ಶನದ ಮೂಲಕ ನಡೆಯಲಿದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಾಗಿ ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಛೇರಿಯನ್ನು (ದೂ.ಸಂ: 08242448111) ಸಂಪರ್ಕಿಸಬಹುದಾಗಿದೆ.












