ವಿದ್ಯಾರ್ಥಿಗಳಿಗೆ ಕಿರುಕುಳ ಆರೋಪ – ಇಬ್ಬರು ಅರೆಸ್ಟ್



(ನ್ಯೂಸ್ಕಡಬ) newskadaba.com ಅ. 14. ವಿದ್ಯಾರ್ಥಿಗಳನ್ನು ಹಿಂಬಾಲಿಸಿ ಕಿರುಕುಳ ನೀಡಲೆತ್ನಿಸಿದ ಆರೋಪದಡಿ ಇಬ್ಬರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ.





 

ಬಂಧಿತರನ್ನು ಉದ್ಯಾವರ ಜಮಾಲುದ್ದೀನ್ ಫೈಝಲ್ (39) ಮತ್ತು ಹೊಸಬೆಟ್ಟುವಿನ ರಾಫಿಲ್ (45) ಎಂದು ಗುರುತಿಸಲಾಗಿದೆ.






ಮಂಜೇಶ್ವರ ಗೋವಿಂದ ಪೈ ಕಾಲೇಜು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಹಿಂಬಾಲಿಸಿ ಕಾರಿನಲ್ಲಿ ಬಂದ ಆರೋಪಿಗಳು ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡಲು ಯತ್ನಿಸಿದ್ಧರು ಎನ್ನಲಾಗಿದೆ. ನಂತರ ವಿದ್ಯಾರ್ಥಿನಿಯರು ಹೇಗೋ ತಪ್ಪಿಸಿ ಮನೆಗೆ ತಲುಪಿದ್ದರು. ಈ ಕುರಿತು ವಿದ್ಯಾರ್ಥಿನಿಯರು ಮಂಜೇಶ್ವರ ಠಾಣೆಗೆ ನೀಡಿದ ದೂರಿನಂತೆ ಇಬ್ಬರನ್ನು ಬಂಧಿಸಲಾಗಿದೆ.

error: Content is protected !!
Scroll to Top