(ನ್ಯೂಸ್ ಕಡಬ) newskadaba.com ಬಹರೈನ್, ಎ.25. ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಅಲೆಮಾರಿ ಮುಸ್ಲಿಂ ಬಕರ್ ವಾಲ್ ಬುಡಕಟ್ಟು ಸಮುದಾಯದ ಎಂಟರ ಹರೆಯದ ಬಾಲಕಿ “ಆಸಿಫಾ”ಳ ಅತ್ಯಾಚಾರ ಮತ್ತು ಉತ್ತರ ಪ್ರದೇಶದ ಉನ್ನೊವೊ ಹಾಗು ಗುಜಾರಾತಿನ ಸೂರತಿನಲ್ಲಿ ನಡೆದ
ಹತ್ಯೆಯನ್ನು ಖಂಡಿಸಿ ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಗುದೈಬಿಯ ಅಂಡಲಸ್ ಗಾರ್ಡನ್ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಿತು.
ಕೆಸಿಎಫ್ ಮಹ್ರರಕ್ ಸೆಕ್ಟರ್ ಆಯೋಜಿಸಿದ “ಜಸ್ಟಿಸ್ ಫೋರ್ ಆಶಿಫಾ” ಪ್ರತಿಭಟನೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ರವರು ಮಾತನಾಡಿ, ಮುಗ್ಧ ಬಾಲಕಿಯನ್ನು ಅಪಹರಿಸಿದ ಜನರ ತಂಡವು ಏಳು ದಿವಸಗಳ ಕಾಲ ಸಾಮೂಹಿಕ ವಾಗಿ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆಗೈದ ಘಟನೆಯು ಅತ್ಯಂತ ಹೀನಾಯ ಹಾಗೂ ಪೈಶಾಚಿಕ ಕೃತ್ಯವಾಗಿದೆ. ಇದು ಇನ್ನು ಮುಂದೆ ಮರುಕಳಿಸದ ರೀತಿಯಲ್ಲಿ
ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುವಂತಾಗಬೇಕೆಂದರು. ಹೈದರ್ ಸಅದಿ ಉಸ್ತಾದರ ದುಃಅದೊಂದಿಗೆ ಆರಂಭಗೊಡ ಪ್ರತಿಭಟನೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಫಾರೂಕ್ ಎಸ್.ಎಂ. ರವರರು ಕಥುವ ದಲ್ಲಿ ನಡೆದ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ರಕ್ಷಕರಾಗಬೇಕಿದ್ದ ಪೊಲೀಸರೇ ಭಕ್ಷಕರಾಗಿ ಈ ರೀತಿಯ ನೀಚ ಕೃತ್ಯದಲ್ಲಿ ಶಾಮೀಲಾಗಿದ್ದು ಕಾನೂನು ವ್ಯವಸ್ಥೆಗೆ ಅವಮಾನವಾಗಿದೆ. ನ್ಯಾಯ ಒದಗಿಸಬೇಕಾಗಿರುವ ಬಾರ್ ಅಸೋಸಿಯೇಷನ್, ಬಂಧಿಸಲ್ಪಟ್ಟ ಆರೋಪಿಗಳನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಧರಣಿ ಮಾಡುತ್ತಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಆತಂಕ ಕಾರಿಯಾಗಿದೆ ಎಂದರು.
ಕೆ.ಸಿ.ಎಫ್ ಬಹರೈನ್ ಐಎನ್ಸಿ ಪ್ರತಿನಿಧಿಗಳು, ರಾಷ್ಟ್ರೀಯ ಸಮಿತಿ ನೇತಾರರು, ಝೋನ್ ಹಾಗೂ ಸೆಕ್ಟರ್ಗಳ ನೇತಾರರು , ಇನ್ನಿತರ ಸಂಘಟನೆಗಳ ನೇತಾರರು ಸದಸ್ಯರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.