ಬೆಂಗಳೂರು: ಕಾರ್ಪೊರೇಟ್ ಸಫೈರೋ ಫಾರೆಕ್ಸ್ ಕಾರ್ಡ್ ಅನ್ನು ಬಿಸಿನೆಸ್ ಪ್ರಯಾಣಿಕರಿಗಾಗಿ ಬಿಡುಗಡೆ



(ನ್ಯೂಸ್ಕಡಬ) newskadaba.com,  ಅ.11 ಬೆಂಗಳೂರು : ಐಸಿಐಸಿಐ ಬ್ಯಾಂಕ್ ಮತ್ತು ವೀಸಾ ಸಂಸ್ಥೆಗಳು ಜಂಟಿಯಾಗಿ ಭಾರತದ ಉದ್ಯಮಿ ಗಳು ಮತ್ತು ಕಾರ್ಪೊರೇಟ್ ಮಂದಿಗೆ ವಿದೇಶ ಪ್ರವಾಸ ಸಂದರ್ಭದಲ್ಲಿ ಅನುಕೂಲ ಒದಗಿಸುವ ಪ್ರೀಪೇಯ್ಡ್ ಫಾರೆಕ್ಸ್ ಕಾರ್ಡ್ ಆಗಿರುವ ಕಾರ್ಪೊರೇಟ್ ಸಫೈರೋ ಫಾರೆಕ್ಸ್ ಕಾರ್ಡ್ ಅನ್ನು ಬಿಡುಗಡೆ ಮಾಡಿವೆ. ಬಿಸಿನೆಸ್ ಪ್ರಯಾಣಿಕರಿಗಾಗಿ ರೂಪಿಸಲಾದ ಮೊದಲ ಬಗೆಯ ಕಾರ್ಡ್ ಆಗಿದ್ದು, ವೀಸಾ ಇನ್ಫಿನಿಟ್ ಸೌಲಭ್ಯಗಳು ದೊರೆಯಲಿದೆ ಮತ್ತು ಪ್ರೀಪೇಯ್ಡ್ ಫಾರೆಕ್ಸ್ ಕಾರ್ಡ್‌ ನ ಅನುಕೂಲತೆ ಲಭ್ಯವಾಗಲಿದೆ.





ಆಗಾಗ ಪ್ರಯಾಣ ಮಾಡುವ ಉದ್ಯಮ ಪ್ರಯಾಣಿಕರಿಗೆ ಹಲವಾರು ಲೈಫ್ ಸ್ಟೈಲ್ ಪ್ರಯೋಜನಗಳು, ಅಪೂರ್ವ ಸೌಲಭ್ಯ ಮತ್ತು ಮೌಲ್ಯವನ್ನು ಒದಗಿಸಲಾಗುತ್ತದೆ. ಕಾರ್ಪೊರೇಟ್ ಸಫೈರೋ ಫಾರೆಕ್ಸ್ ಕಾರ್ಡ್ ಪ್ರೀಮಿಯಂ ಮಟ್ಟದ ಪ್ರವಾಸ ಮತ್ತು ಜೀವನಶೈಲಿ ಪ್ರಯೋಜನಗಳನ್ನು ನೀಡುತ್ತದೆ.






ಈ ಕಾರ್ಡ್ 15 ಕರೆನ್ಸಿಗಳನ್ನು ಲೋಡ್ ಮಾಡಿ ಮತ್ತು ವಹಿವಾಟು ಮಾಡುವ ಸ್ವಾತಂತ್ರ್ಯ ಮತ್ತು ಸೌಲಭ್ಯವನ್ನು ನೀಡುತ್ತದೆ. ಇದಲ್ಲದೆ, ಕ್ರಾಸ್-ಕರೆನ್ಸಿ ಮಾರ್ಕ್-ಅಪ್ ಶುಲ್ಕ ಜೀರೋ ಆಗಿದ್ದು, ಗ್ರಾಹಕರು ಕಾರ್ಡ್‌ ನಲ್ಲಿ ಒಂದು ಕರೆನ್ಸಿಯನ್ನು ಮಾತ್ರ ಲೋಡ್ ಮಾಡಿದರೂ ಸಹ ಜಗತ್ತಿನಾ ದ್ಯಂತ ಸುಲಭವಾಗಿ ಪ್ರವಾಸ ಮಾಡಬಹುದು. ಸ್ವಾಗತ ಕಿಟ್‌ ನೊಂದಿಗೆ ಎರಡು ಕಾರ್ಡ್‌ಗಳು ಬರುತ್ತವೆ, ಅದರಲ್ಲಿ ಪ್ರೈಮರಿ ಕಾರ್ಡ್ ಮತ್ತು ರಿಪ್ಲೇಸ್ ಮೆಂಟ್ ಕಾರ್ಡ್ ಇರುತ್ತದೆ. ರಿಪ್ಲೇಸ್ ಮೆಂಟ್ ಕಾರ್ಡ್, ಪ್ರೈಮರಿ ಕಾರ್ಡ್ ಕಳೆದು ಹೋದರೆ ಬ್ಯಾಕ್-ಅಪ್ ಆಗಿ ಕಾರ್ಯನಿರ್ವಹಿಸುತ್ತದೆ.

error: Content is protected !!
Scroll to Top