ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್‌ 1!



(ನ್ಯೂಸ್ಕಡಬ) newskadaba.com,  .10 : ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ, ರಿಷಬ್‌ ಶೆಟ್ಟಿ ಅಭಿನಯದ ʼಕಾಂತಾರ ಚಾಪ್ಟರ್‌ 1′ ಗ್ಲೋಬಲ್‌ ಹಿಟ್‌ ಆಗಿದೆ. ರಾಜ್ಯ, ದೇಶೀಯ ಹಾಗೂ ಅಂತಾರಾಷ್ಟ್ರೀಯ ಗಲ್ಲಾಫೆಟ್ಟಿಗೆಯಲ್ಲಿ ದಾಖಲೆಗಳ ಮೇಲೆ ದಾಖಲೆಗನ್ನು ಉಡೀಸ್‌ ಮಾಡುತ್ತಲೇ ಸಾಗಿದೆ. ಬಿಡುಗಡೆಯಾದ ಅಕ್ಟೋಬರ್ 2 ದಿನಾಂಕದಿಂದ ಇಲ್ಲಿಯವರೆಗೆ ವಿಶ್ವಾದ್ಯಂತ ₹ 509 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಭರ್ಜರಿ ಯಶಸ್ಸನ್ನು ಸಾಧಿಸಿದೆ. ಬಿಡುಗಡೆ ಆದ ಎಂಟು ದಿನಗಳಲ್ಲಿ 2022ರ ‘ಕಾಂತಾರ’ ಮತ್ತು ‘ಕೆಜಿಎಫ್ 1’ ಸಿನಿಮಾದ ಕಲೆಕ್ಷನ್ ದಾಖಲೆಗಳನ್ನು ಮುರಿದಿದೆ.





ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆ ಆದ ಎಂಟು ದಿನಗಳಲ್ಲಿ ಭಾರತದಲ್ಲಿ 330 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ. ವಾರದ ದಿನಗಳಲ್ಲಿಯೂ ಸಹ ಸಿನಿಮಾದ ಕಲೆಕ್ಷನ್​​​ನಲ್ಲಿ ಕುಸಿತ ಉಂಟಾಗಿಲ್ಲ. ಕಳೆದ ಸೋಮವಾರದಂದು 31.5 ಕೋಟಿ, ಮಂಗಳವಾರದಂದು 33.50 ಕೋಟಿ ಗಳಿಕೆ ಮಾಡಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬುಧವಾರ ಕಲೆಕ್ಷನ್​​​ನಲ್ಲಿ ತುಸು ಕಡಿಮೆ ಅಂದರೆ 25 ಕೋಟಿ ಮಾಡಿತ್ತು. ನಿನ್ನೆ ಗುರುವಾರದಂದು ಸಿನಿಮಾ 20.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ ಶುಕ್ರವಾರದಿಂದ ಮತ್ತೆ ಸಿನಿಮಾದ ಕಲೆಕ್ಷನ್ ಹೆಚ್ಚಾಗುವ ಸೂಚನೆಗಳಿವೆ. ವೀಕೆಂಡ್​​​ನಲ್ಲಿ ಮತ್ತೆ ಸಿನಿಮಾದ ಕಲೆಕ್ಷನ್ ಏರಿಕೆ ಆಗುವುದು ಪಕ್ಕಾ ಅನಿಸಿದೆ.






‘ಕಾಂತಾರ: ಚಾಪ್ಟರ್ 1’ ಸಿನಿಮಾ ಒಂದೇ ವಾರಕ್ಕೆ 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಮತ್ತು ಕನ್ನಡದ ಮೊದಲ ಬಾಕ್ಸ್ ಆಫೀಸ್ ಬ್ಲಾಕ್ ಬಸ್ಟರ್ ಸಿನಿಮಾ ‘ಕೆಜಿಎಫ್ 1’ ದಾಖಲೆಗಳನ್ನು ಹಿಂದಿಕ್ಕಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರತದಲ್ಲಿ ಎಂಟು ದಿನಗಳಲ್ಲಿ ಸುಮಾರು 350 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವದಾದ್ಯಂತ ಸುಮಾರು 509 ಕೋಟಿ ಗಳಿಕೆ ಮಾಡಿದೆ.

error: Content is protected !!
Scroll to Top