ದಕ್ಷಿಣ ಫಿಲಿಪೈನ್ಸ್ ಸಮುದ್ರದಲ್ಲಿ ಭೂಕಂಪ, ಸುನಾಮಿ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,  ಅ.10 ಮನಿಲಾ– ದ್ವೀಪರಾಷ್ಟ್ರ ಫಿಲಿಪೈನ್‌ನ ದಕ್ಷಿಣ ಪ್ರಾಂತ್ಯದಲ್ಲಿ ಬೆಳಿಗ್ಗೆ ರಿಕ್ಟರ್‌ ಮಾಪನದಲ್ಲಿ 7.6 ತೀವ್ರತೆಯ ಭೂಕಂಪನ ಸಂಭವಿಸಿದ್ದು ,ಅಪಾಯಕಾರಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ದಾವೊ ಓರಿಯೆಂಟಲ್‌ ಪ್ರಾಂತ್ಯದ ಮನಾಯ್‌ ಪಟ್ಟಣದ ಆಗ್ನೇಯಕ್ಕೆ ಸುಮಾರು 62 ಕಿಲೋಮೀಟರ್‌ ದೂರದ ಸಮುದ್ರದಲ್ಲಿ ಕೇಂದ್ರೀಕೃತವಾಗಿರುವ ಮತ್ತು 10 ಕಿಲೋಮೀಟರ್‌ ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ.

ಹೊನೊಲುಲುವಿನಲ್ಲಿರುವ ಪೆಸಿಫಿಕ್‌ ಕಡಲ ತೀರದ ಪ್ರದೇಶಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.ಅಪಾಯಕಾರಿ ಅಲೆಗಳು ಅಪದಪಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ತುರ್ತು ಕಾರ್ಯಕರ್ತರು ಕರಾವಳಿ ಪ್ರದೇಶಗಳಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುತ್ತಿದ್ದಾರೆ ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ.

ಇಂಡೋನೇಷ್ಯಾದಲ್ಲಿ ಸಮುದ್ರದ ಸುನಾಮಿ ಅಲೆ ಅಪ್ಪಳಿಸಿದೆ ಎಂದು ಭೂಕಂಪ ಮತ್ತು ಸುನಾಮಿ ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.ನಾವು ಇದನ್ನು ಸಣ್ಣ ಸುನಾಮಿ ಎಂದು ಕರೆಯುತ್ತೇವೆ ಇದು ವಿನಾಶದ ದೊಡ್ಡ ಅಲೆಗಳಲ್ಲ ಹೇಳಿದರು.ಇಂಡೋನೇಷ್ಯಾದ ಭೂಕಂಪಶಾಸ್ತ್ರ ಸಂಸ್ಥೆಯ ದತ್ತಾಂಶದ ಆಧಾರದ ಮೇಲೆ, ಉತ್ತರ ಸುಲವೇಸಿಯ ತಲಾಡ್‌ ದ್ವೀಪಗಳಲ್ಲಿಸುನಾಮಿ ಅಲೆಗಳು ದಾಖಲಾಗಿವೆ.

Scroll to Top