(ನ್ಯೂಸ್ ಕಡಬ) newskadaba.com, ಅ.02 ಬೆಂಗಳೂರು: ಚಿನ್ನದ ಬೆಲೆ ಈಗಾಗಲೇ ಗರಿಷ್ಠ ಮಟ್ಟಕ್ಕೇರಿದ್ದು ಭಾರೀ ಪ್ರಮಾಣದ ಬೆಲೆ ಹೆಚ್ಚಳದ ಬಳಿಕ ಇಂದು ಕೊಂಚ ಇಳಿಕೆ ಆಗಿದೆ.
ಇಂದಿನ ಬೆಲೆ
ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 11,869 ರೂಪಾಯಿ ಆಗಿದ್ದು,ಇಂದು ಬರೋಬ್ಬರಿ 55 ರೂಪಾಯಿ ಕಡಿಮೆ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 50 ರೂಪಾಯಿ ಕಡಿಮೆ ಆಗಿದ್ದು, 10,880 ರುಪಾಯಿ ಆಗಿದೆ
10 ಗ್ರಾಂ ಬೆಲೆ ಎಷ್ಟು?
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 550 ರೂಪಾಯಿ ಕಡಿಮೆ ಆಗಿ, 1,18,690 ರುಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 500 ರೂ ಕಡಿಮೆ ಆಗಿ, 1,08,800 ರೂಪಾಯಿಗೆ ಇಳಿಕೆ ಆಗಿದೆ.








