ಚಿಕನ್ ಬೇಕೆಂದು ಒತ್ತಾಯಿಸಿದ 7 ವರ್ಷದ ಮಗನಿಗೆ ತಾಯಿಯೇ ಲಟ್ಟಣಿಗೆಯಿಂದ ಹೊಡೆತ ; ಮಗ ಸಾವು, ಮಗಳಿಗೆ ಗಾಯ



(ನ್ಯೂಸ್‌ ಕಡಬ) newskadaba.com,  ಸೆ.29 ಮುಂಬೈ: ಚಿಕನ್ ಬೇಕೆಂದ ಮಕ್ಕಳಿಗೆ ಲಟ್ಟಣಿಗೆಯಿಂದ ಹೊಡೆದು ಕೊಂದ ದಾರುಣ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದೆ.ಮೃತ ಬಾಲಕನನ್ನು ಚಿನ್ಮಯ್ ಧುಮ್ಡೆ (7) ಎಂದು ಗುರುತಿಸಲಾಗಿದೆ.





ಬಾಲಕನು ತನ್ನ ಅಮ್ಮ ಪಲ್ಲವಿ ಧುಮ್ಡೆ (40) ಬಳಿ ಚಿಕನ್ ಬೇಕೆಂದು ಕೇಳಿದ್ದ. ಇದರಿಂದ ಕೋಪಗೊಂಡ ಆಕೆ ಆತನನ್ನು ಲಟ್ಟಣಿಗೆಯಿಂದ ಹೊಡೆದು ಕೊಂದಿದ್ದಾಳೆ. ಜೊತೆಗೆ ತನ್ನ 10 ವರ್ಷದ ಮಗಳ ಮೇಲೂ ಆಕೆ ಹಲ್ಲೆ ನಡೆಸಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.






ಮಕ್ಕಳ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪಾಲ್ಘರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ.ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103(1) (ಕೊಲೆ) ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ದೇಶ್‌ಮುಖ್ ಮಾಹಿತಿ ನೀಡಿದ್ದಾರೆ.

 

error: Content is protected !!
Scroll to Top