ಬೆಂಗಳೂರಿನಲ್ಲಿ ಪಿಸ್ತೂಲ್ ತೋರಿಸಿ ಯುವಕನ ಅಪಹರಣ, ನಾಲ್ವರು ಆರೋಪಿಗಳ ಬಂಧನ



(ನ್ಯೂಸ್‌ ಕಡಬ) newskadaba.com,  ಸೆ.25 ಬೆಂಗಳೂರು: ಗನ್ ತೋರಿಸಿ ಯುವಕನನ್ನು ಅಪಹರಿಸಿ, ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಪೀಣ್ಯ ಪೊಲೀಸರು ನಾಲ್ವರು ಆರೋಪಿಗಳನ್ನು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.







ಬಂಧಿತರನ್ನು ಕನಕಮೂರ್ತಿ, ಕಿರಣ್, ಶ್ರೀನಿವಾಸ್ ಮತ್ತು ಮಾಲಿಂಗ್ ಸಾಬ್ ಶೇಖ್ ಎಂದು ಗುರುತಿಸಲಾಗಿದೆ. ಆಗಸ್ಟ್ 14 ರಂದು ಪೀಣ್ಯ ಪೊಲೀಸ್ ವ್ಯಾಪ್ತಿಯ ಜಾಲಹಳ್ಳಿಯಲ್ಲಿ ತನ್ನ ಊರಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದಾಗ ಯುವಕನನ್ನು ಆರೋಪಿಗಳು ಅಪಹರಿಸಿದ್ದರು.






ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಖರೀದಿಸಲು ಆತ ನಗರಕ್ಕೆ ಬಂದಿದ್ದ. ದಾಬಸ್ಪೇಟೆ ತಲುಪುತ್ತಿದ್ದಂತೆ, ಆರೋಪಿಗಳು ಯುವಕನನ್ನು ಪಿಸ್ತೂಲ್ ತೋರಿಸಿ ಬೆದರಿಸಿ 5,000 ರೂ. ಹಣ ಮತ್ತು 75,000 ರೂ. ಮೌಲ್ಯದ 2  ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಯುವಕನನ್ನು ಕಾರಿನಿಂದ ಹೊರಗೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಯುವಕ ಸ್ಥಳೀಯರ ಸಹಾಯದಿಂದ ತನ್ನ ಊರಿಗೆ ತಲುಪಿದ್ದು, 4 ದಿನಗಳ ನಂತರ ಪೊಲೀಸರಿಗೆ ದೂರು ನೀಡಿದ್ದಾನೆ.ಘಟನೆ ನಡೆದ ಹತ್ತು ದಿನಗಳ ನಂತರ, ಮಾರತ್ತಹಳ್ಳಿಯ ದೊಡ್ಡಾನೆಕುಂಡಿಯಲ್ಲಿ ಪೊಲೀಸರು 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

error: Content is protected !!
Scroll to Top