ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಂಗಳೂರು: ಹೊನ್ನೆಕಟ್ಟೆ-ಕಾನ ಮೇಲ್ಸೇತುವೆ ಸೆ.17 ರಿಂದ30ರ ತನಕ ಸಂಚಾರ ನಿಷೇಧ – News Kadaba

ಮಂಗಳೂರು: ಹೊನ್ನೆಕಟ್ಟೆ-ಕಾನ ಮೇಲ್ಸೇತುವೆ ಸೆ.17 ರಿಂದ30ರ ತನಕ ಸಂಚಾರ ನಿಷೇಧ

(ನ್ಯೂಸ್‌ ಕಡಬ) newskadaba.com,  ಸೆ.17 ಮಂಗಳೂರು: ಹೊನ್ನೆಕಟ್ಟೆ-ಕಾನ ರೈಲ್ವೆ ಮೇಲ್ವೇತುವೆಯ ಮೇಲೆ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 16ರ ವರೆಗೆ 30 ದಿನಗಳ ಕಾಲ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸೇತುವೆಯ ಮೇಲೆ ಕಾಂಕ್ರೀಟಿಕರಣ ಕಾಮಗಾರಿ ನಡೆಯುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ ಈ ಕೆಳಗಿನಂತೆ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ: ಕುಲಾಯಿ-ಹೊನ್ನೆಕಟ್ಟೆ ಮಾರ್ಗವಾಗಿ ಮಂಗಳೂರಿನಿಂದ ಎಂಆರ್‌ಪಿಎಲ್ (ಒಎನ್‌ಜಿಸಿ) ಕಡೆಗೆ ಸಂಚರಿಸುವ ವಾಹನಗಳು ಹೊಸಬೆಟ್ಟು-ಸುರತ್ಕಲ್ ಜಂಕ್ಷನ್ ಮಾರ್ಗವನ್ನು ಬಳಸಿಕೊಂಡು ಎಂಆರ್‌ಪಿಎಲ್ ತಲುಪಬೇಕು.

ಎಂಆರ್‌ಪಿಎಲ್‌ನಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಎಂಆರ್‌ಪಿಎಲ್-ಸುರತ್ಕಲ್ ಜಂಕ್ಷನ್ ಮೂಲಕ ಸಂಚರಿಸಿ, ಎನ್‌ಹೆಚ್-66 ಸರ್ವೀಸ್ ರಸ್ತೆಯಾದ ಗೋವಿಂದಾಸ್ ಮೂಲಕ ಮಂಗಳೂರು ತಲುಪಬೇಕು.ಸುರತ್ಕಲ್‌-ಗೋವಿಂದಾಸ್ ಸರ್ವೀಸ್ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ನಿಷೇಧಿಸಲಾಗಿದೆ.ಏಕಮುಖ ಸಂಚಾರಕ್ಕೆ ಅನುಕೂಲವಾಗುವಂತೆ ಗೋವಿಂದಾಸ್‌ನಿಂದ ಸುರತ್ಕಲ್ ಕಡೆಗೆ ಸುರತ್ಕಲ್-ಗೋವಿಂದಾಸ್ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಗರಿಷ್ಠ ಸಂಚಾರದ ಅವಧಿಯಲ್ಲಿ (ಬೆಳಗ್ಗೆ 8 ರಿಂದ 9 ಮತ್ತು ಸಂಜೆ 4 ರಿಂದ 6) ಎಂಆರ್‌ಪಿಎಲ್, ಹೆಚ್‌ ಪಿಸಿಎಲ್, ಬಿಎಎಸ್‌ಎಫ್ ಮತ್ತು ಇತರ ಕಂಪನಿಗಳಿಗೆ ಸೇರಿದ ವಾಹನಗಳು ಸುರತ್ಕಲ್-ಗೋವಿಂದಾಸ್ ಸರ್ವೀಸ್ ರಸ್ತೆಯನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಸಂಚಾರಕ್ಕೆ ಸಹಕರಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top