ಕಾರಿನ ಸನ್ ರೂಫ್ ಮೋಜಿಗಾಗಿ ಬಳಸಿದರೆ ಜೈಲು ಶಿಕ್ಷೆ!

(ನ್ಯೂಸ್‌ ಕಡಬ) newskadaba.com ಸೆ. 09. ಕಾರಿನ ಸನ್ ರೂಫ್​ನಲ್ಲಿ ನಿಂತಿದ್ದ ಬಾಲಕನ ತಲೆಗೆ ಹೈ ಬೇರಿಯರ್ ತಗುಲಿದ್ದ ಘಟನೆ ಸಂಬಂಧಿಸಿ ಯಲಹಂಕ ಸಂಚಾರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಬಿಎನ್​ಎಸ್ ಕಾಯ್ದೆಯ ಸೆಕ್ಷನ್ 125(a) ಮತ್ತು 281 ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ.

ಕಾರಿನ ಸನ್ ರೂಫ್​ನಲ್ಲಿ ನಿಂತಿದ್ದ ಬಾಲಕನ ತಲೆಗೆ ಹೈ ಬೇರಿಯರ್ ಬಡಿದಿದ್ದು, ಅದೃಷ್ಟವಶಾತ್, ಕೂದಲೆಳೆ ಅಂತರದಲ್ಲಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದ. ಸದ್ಯ ಪ್ರಕರಣ ದಾಖಲಿಸಿರುವ ಯಲಹಂಕ ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕಾರಿನ ಸನ್ ರೂಫ್ ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡಿದರೆ ಬಿಎನ್​ಎಸ್ ಕಾಯ್ದೆಯ ಸೆಕ್ಷನ್ 125(A) ಅಡಿ ಶಿಕ್ಷೆ ವಿಧಿಸಲಾಗುತ್ತದೆ. ಗಾಯಗಳು ಉಂಟಾಗಿವೆಯೋ ಅಥವಾ ಇಲ್ಲವೋ ಎಂಬುವುದರ ಮೇಲೆ ಶಿಕ್ಷೆಯ ಪ್ರಮಾಣ ಅವಲಂಬಿಸಿರುತ್ತದೆ. ಯಾವುದೇ ಗಾಯ ಉಂಟಾಗದಿದ್ದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ, 2,500 ರೂ. ವರೆಗೆ ದಂಡ ಅಥವಾ ಎರಡೂ ವಿಧಿಸಬಹುದಾಗಿದೆ.

Scroll to Top