‘ನಮ್ಮ ಮೆಟ್ರೊ’ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭ ಸುದ್ದಿ



(ನ್ಯೂಸ್‌ ಕಡಬ) newskadaba.com ಸೆ. 09. ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ‘ನಮ್ಮ ಮೆಟ್ರೋ’ ಹಳದಿ ಮಾರ್ಗದಲ್ಲಿ ನಾಲ್ಕನೇ ರೈಲು ಈ ವಾರದಿಂದ ಸಂಚಾರ ಆರಂಭಿಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ,







ಪ್ರಸ್ತುತ ಈ ಮಾರ್ಗದಲ್ಲಿ 3 ರೈಲುಗಳು ಸಂಚರಿಸುತ್ತಿದ್ದು, 4ನೇ ರೈಲಿನ ಸೇರ್ಪಡೆಯು ಪೀಕ್-ಅವರ್’ನಲ್ಲಿ ಕಾಯುವಿಕೆ ಸಮಯವನ್ನು 25 ನಿಮಿಷಗಳಿಂದ ಸುಮಾರು 15 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.






4ನೇ ರೈಲಿನ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ವಾರ ಪ್ರಯಾಣಿಕರ ಸೇವೆಗೆ ಪರಿಚಯಿಸಲಾಗುವುದು. ಇದರಿಂದ ಪೀಕ್-ಅವರ್ ನಲ್ಲಿ ಕಾಯುವಿಕೆ ಸಮಯವನ್ನು 25 ನಿಮಿಷಗಳಿಂದ ಸುಮಾರು 15 ನಿಮಿಷಗಳವರೆಗೆ ಕಡಿಮೆ ಮಾಡಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲುಗಳ ಸೇರ್ಪಡೆಗೊಳಿಸಲಾಗುವುದು ಎಂದು BMRCL ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌವ್ಹಾಣ್ ಹೇಳಿದ್ದಾರೆ.

error: Content is protected !!
Scroll to Top