ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪಾಕಿಸ್ತಾನ: ಹೆಲಿಕಾಪ್ಟರ್ ಪತನ-ಐವರು ಸಾವು – News Kadaba

ಪಾಕಿಸ್ತಾನ: ಹೆಲಿಕಾಪ್ಟರ್ ಪತನ-ಐವರು ಸಾವು

(ನ್ಯೂಸ್‌ ಕಡಬ) newskadaba.com,  ಸೆ.02: ನೂತನವಾಗಿ ನಿರ್ಮಾಣವಾಗಿದ್ದ ಹೆಲಿಪ್ಯಾಡ್‌ ಮೇಲೆ ಲ್ಯಾಂಡಿಂಗ್‌ ಟೆಸ್ಟ್‌ ನಡೆಸುತ್ತಿದ್ದಾಗ ಪಾಕಿಸ್ತಾನದ ಸರ್ಕಾರಿ ಹೆಲಿಕಾಪ್ಟರ್‌ ಪತನಗೊಂಡು ಐವರು ಸಾವನ್ನಪ್ಪಿರುವ ಘಟನೆ ಗಿಲ್ಗಿಟ್‌-ಬಾಲ್ಟಿಸ್ತಾನ್‌ನಲ್ಲಿ ನಡೆದಿದೆ.

ಡೈಮರ್‌ ಜಿಲ್ಲೆಯ ಚಿಲಾಸ್‌‍ನ ಥೋರ್‌ ಪ್ರದೇಶದ ಬಳಿ ಈ ಅವಘಡ ಸಂಭವಿಸಿದ್ದು,ದುರಂತದಲ್ಲಿ ಪರಿಣಾಮ ಇಬ್ಬರು ಪೈಲಟ್‌ ಸೇರಿ ಮೂವರು ತಂತ್ರಜ್ಞರು ಸಾವನ್ನಪ್ಪಿದ್ದಾರೆ.ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚಿಗೆ ಖೈಬರ್‌ ಪ್ರಾಂತ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಇದೇ ಮಾದರಿಯ ಎಂಐ-17 ಸರ್ಕಾರಿ ಹೆಲಿಕಾಪ್ಟರ್‌ ಪತನಗೊಂಡಿತ್ತು. ಅದಾದ ಕೆಲವು ದಿನಗಳ ನಂತರ ಇದೀಗ ಮತ್ತೊಂದು ಹೆಲಿಕಾಪ್ಟರ್‌ ಪತನಗೊಂಡಿದೆ.

ಹೆಲಿಕಾಪ್ಟರ್‌ ಭೂಸ್ಪರ್ಷ ಮಡುವಾಗ ತಾಂತ್ರಿಕ ದೋಷ ಕಂಡುಬಂದಿದ್ದು ಸುಮಾರು 100 ಅಡಿಯಿಂದ ನೆಲಕ್ಕೆ ಅಪ್ಪಳಿಸಿದೆ ಎಂದು ಮೂಲಗಳು ತಿಳಿಸಿವೆ.ಸ್ಥಳದಲ್ಲಿದ್ದ ಕೆಲವರು ದೂರ ಓಡಿ ಜೀವ ಉಳಿಸಿಕೊಂಡಿದ್ದಾರೆ.

Scroll to Top