ಮಹಿಳಾ ಏಕದಿನ ವಿಶ್ವಕಪ್ 2025: 122 ಕೋಟಿ ರೂ ಬಹುಮಾನ ಘೋಷಿಸಿದ ಐಸಿಸಿ



(ನ್ಯೂಸ್ ಕಡಬ) newskadaba.com ಸೆ. 01. ಇದೇ ಸೆಪ್ಟೆಂಬರ್ 30 ರಿಂದ ನವೆಂಬರ್ 2ರ ವರೆಗೆ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ದಾಖಲೆಯ 122.56 ಕೋಟಿ ರೂ. ಮೊತ್ತದ ಬಹುಮಾನ ಘೋಷಿಸಿದೆ. ಇದು ಈವರೆಗಿನ ಬಹುಮಾನಕ್ಕಿಂತ 297% ಹೆಚ್ಚಳವಾಗಿದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ತಿಳಿಸಿದ್ದಾರೆ.





ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ವಿಶ್ವಕಪ್ ಬಹುಮಾನದ ಒಟ್ಟು ಮೊತ್ತವನ್ನು 13.88 ಮಿಲಿಯನ್ ಅಂದ್ರೆ ಸರಿಸುಮಾರು 122.55 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ.






ಈ ಪೈಕಿ ಪ್ರಶಸ್ತಿ ವಿಜೇತರಿಗೆ 29.50 ಕೋಟಿ, ರನ್ನರ್ ಅಪ್‌ಗೆ 19.75 ಕೋಟಿ ಹಾಗೂ ಸೆಮಿಫೈನಲಿಸ್ಟ್ ಗೆ 9.89 ಕೋಟಿ ರೂ. ಬಹುಮಾನ ನೀಡುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

error: Content is protected !!
Scroll to Top