ಸುಬ್ರಹ್ಮಣ್ಯ: ರಕ್ತದ ಕ್ಯಾನ್ಸರ್ ಗೆ ತುತ್ತಾದ ವಿದ್ಯಾರ್ಥಿನಿಗೆ ಬೇಕಾಗಿದೆ ದಾನಿಗಳ ಸಹಾಯ ಹಸ್ತ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಎ.17. ಎಲ್ಲರಂತೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ರಕ್ತದ ಕ್ಯಾನ್ಸರ್ (ಲ್ಯುಕೇಮಿಯಾ) ಖಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಸುಳ್ಯ ತಾಲೂಕಿನ ಸಂಸದರ ಆದರ್ಶ ಗ್ರಾಮವಾದ ಬಳ್ಪ ಗ್ರಾಮದ ಹೊಪ್ಪಾಳೆ ಮನೆ ನಿವಾಸಿ ಜಯಕುಮಾರ್ – ಕುಸುಮಾ ದಂಪತಿಯ ಪುತ್ರಿ ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಕು. ಪೂಜಾಶ್ರೀ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ದಾನಿಗಳ ಸಹಾಯ ಹಸ್ತಕ್ಕೆ‌ ಕೈಚಾಚಿದ್ದಾರೆ. ಜ್ವರ ಬಂತೆಂದು ವೈದ್ಯರನ್ನು ಭೇಟಿಯಾದಾಗ ಅವರು ಹೇಳಿದ ಮಾತು ಕೇಳಿ ಕುಟುಂಬದವರೊಡನೆ ನಗುನಗುತ್ತಾ ಜೀವನ ಕಳೆಯುತ್ತಿದ್ದ ಪೂಜಾಶ್ರೀಗೆ ಚೇತರಿಸಿಕೊಳ್ಳಲಾಗದಷ್ಟು ದೊಡ್ಡ ಆಘಾತವಾಗಿದೆ. ತಂದೆ ತಾಯಿಗೆ ದಿಕ್ಕೆ ತೋಚದಾಗಿದ್ದು, ಇಡೀ ಕುಟುಂಬವೇ ದಂಗಾಗಿ ಹೋಯಿತು. ಇನ್ನು ಬದುಕಿ ಬಾಳಬೇಕಿದ್ದ ಪುಟ್ಟ ಹುಡುಗಿಯನ್ನು ರಕ್ತದ ಕ್ಯಾನ್ಸರ್ ಆವರಿಸಿಕೊಂಡಿತ್ತು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು, ಓರ್ವ ಸಹೋದರ ಅಂಗವೈಕ್ಯಲ್ಯದಿಂದ ಬಳಲುತ್ತಿದ್ದಾನೆ. ಇದೀಗ ಹುಡುಗಿ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಚಿಕಿತ್ಸೆಗೆ ಹಣ ಇಲ್ಲದೆ ಪೂಜಾಶ್ರೀಯ ಪೋಷಕರು ಕಂಗಾಲಾಗಿದ್ದು, ಮುಂದಿನ ಚಿಕಿತ್ಸೆಗಾಗಿ ದಾನಿಗಳ ಕಡೆಗೆ ಸಹಾಯ ಹಸ್ತ ಚಾಚಿದ್ದಾರೆ. ಸಹೃದಯಿಗಳು ತಮ್ಮ ಕೈಯಲ್ಲಾದಷ್ಟು ಧನ ಸಹಾಯವನ್ನು ನೀಡಿ ಈ ಪುಟ್ಟ ಬಾಲಕಿಯ ಜೀವ ಉಳಿಸುವ ಪ್ರಯತ್ನ ಮಾಡಬೇಕಾಗಿದೆ.
ಧನ ಸಹಾಯ ಮಾಡುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ.

Also Read  ಕೊರೊನಾ ಶಂಕೆ ಹಿನ್ನೆಲೆ ➤ ಮಂಗಳೂರಿನ ಬಂದರು ‘ಬಂದ್’

ಕುಸುಮಾ ಬಿ.ಜೆ (ಪೂಜಾಶ್ರೀ ತಾಯಿ)
A/c No. 01782200080267
IFC Code: SYNB0000178
ಸಿಂಡಿಕೇಟ್ ಬ್ಯಾಂಕ್ ಪಂಜ ಶಾಖೆ

error: Content is protected !!
Scroll to Top