ಗುತ್ತಿಗಾರು :ಅನಾರೋಗ್ಯದ ಹಿನ್ನಲೆ ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಡಿ.14: ಗುತ್ತಿಗಾರಿನ ವಿದ್ಯಾರ್ಥಿನಿಯೋರ್ವಳು ಅನಾರೋಗ್ಯದ ಹಿನ್ನಲೆಯಲ್ಲಿ ಮೃತ ಪಟ್ಟಿದ್ದಾರೆ.

ಗುತ್ತಿಗಾರು ಗ್ರಾಮದ ಲಿಂಗಪ್ಪ ಗೌಡ ಪೈಲೂರವರ ಪುತ್ರಿ ಯಶಸ್ವಿನಿ ಇಂದು ಅನಾರೋಗ್ಯದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಈಕೆ ಗುತ್ತಿಗಾರಿನ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಳೆಂದು ತಿಳಿದು ಬಂದಿದ್ದು, ಮೃತಳು ತಂದೆ ತಾಯಿ ಸಹೋದರಿಯನ್ನು ಅಗಲಿದ್ದಾರೆ.

Scroll to Top