ಗುಪ್ತಚರ ಇಲಾಖೆಯಲ್ಲಿ 394 ಹುದ್ದೆ ಡಿಪ್ಲೊಮಾ ಹೊಂದಿದವರು ಅಪ್ಲೈ ಮಾಡಿ



(ನ್ಯೂಸ್ ಕಡಬ) newskadaba.com ಆ. 29. ಭಾರತ ಸರ್ಕಾರದ ಗುಪ್ತಚರ ಇಲಾಖೆ (Intelligence Bureau)ಯಲ್ಲಿ ಖಾಲಿ ಇರುವ 394 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.





ಜೂನಿಯರ್‌ ಇಂಟೆಲಿಜೆನ್ಸ್‌ ಆಫೀಸರ್‌ ಗ್ರೇಡ್‌- II ಟೆಕ್‌ (Junior Intelligence Officer Grade-II (Tech) ಹುದ್ದೆ ಇದಾಗಿದ್ದು, ಪದವಿ, ಡಿಪ್ಲೊಮಾ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಬೇಕಿದ್ದು, ಸೆಪ್ಟೆಂಬರ್‌ 14 ಕೊನೆಯ ದಿನವಾಗಿದೆ.






ವಿದ್ಯಾರ್ಹತೆ

ಎಲೆಕ್ಟ್ರಾನಿಕ್ಸ್‌ ಅಥವಾ ಎಲೆಕ್ಟ್ರಾನಿಕ್ಸ್‌ & ಟೆಲಿಕಮ್ಯುನಿಕೇಷನ್‌ ಅಥವಾ ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌ ಅಥವಾ ಎಲೆಕ್ಟ್ರಿಕಲ್‌ & ಎಲೆಕ್ಟ್ರಾನಿಕ್ಸ್‌ ಅಥವಾ ಇನ್ಫಾರ್ಮೇಷನ್‌ ಟೆಕ್ನಾಲಜಿ ಅಥವಾ ಕಂಪ್ಯೂಟರ್‌ ಸೈನ್ಸ್‌ ಅಥವಾ ಕಂಪ್ಯೂಟರ್‌ ಎಂಜಿನಿಯರಿಂಗ್‌ ಅಥವಾ ಕಂಪ್ಯೂಟರ್‌ ಅಪ್ಲಿಕೇಷನ್‌ ವಿಷಯಗಳಲ್ಲಿ ಡಿಪ್ಲೊಮಾ ಹೊಂದಿದವರು, ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ಗುಪ್ತಚರ ಇಲಾಖೆಯ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 27 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ /ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಎಲ್ಲ ಅಭ್ಯರ್ಥಿಗಳು ರಿಕ್ರೂಟ್‌ ಮೆಂಟ್‌ ಪ್ರೊಸೆಸಿಂಗ್‌ ಚಾರ್ಜ್‌ ಫೀಸ್‌ ಆಗಿ 550 ರೂ. ಪಾವತಿಸಬೇಕು. ಇನ್ನು ಪರೀಕ್ಷಾ ಶುಲ್ಕವಾಗಿ ಸಾಮಾನ್ಯ/ಇಡಬ್ಲ್ಯುಎಸ್‌/ಒಬಿಸಿ ಅಭ್ಯರ್ಥಿಗಳು ಹೆಚ್ಚುವರಿಯಾಗಿ 100 ರೂ. (ಅಂದರೆ ಒಟ್ಟು 650 ರೂ.) ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಮಹಿಳಾ ಮತ್ತು ಮಾಜಿ ಸೈನಿಕರು ಪರೀಕ್ಷಾ ಶುಲ್ಕ ನೀಡಬೇಕಾಗಿಲ್ಲ (550 ರೂ. ಪಾವತಿಸಿದರೆ ಸಾಕು).

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ಸ್ಕಿಲ್‌ ಟೆಸ್ಟ್‌, ಸಂದರ್ಶನ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 25,500 ರೂ. – 81,100 ರೂ. ಮಾಸಿಕ ವೇತನ ದೊರೆಯಲಿದೆ. ಕರ್ನಾಟಕದಲ್ಲಿ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರವಿದೆ.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಓಪನ್ ಮಾಡಿ https://cdn.digialm.com/EForms/configuredHtml/1258/94260/Registration.html ಲಾಗಿನ್ ಆಗಿ. ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ: mha.gov.in ಗೆ ಭೇಟಿ ನೀಡಿ.

error: Content is protected !!
Scroll to Top