ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ದಸರಾ ಫುಟ್‍ ಬಾಲ್ ಸ್ಪರ್ಧೆ – News Kadaba

ದಸರಾ ಫುಟ್‍ ಬಾಲ್ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆ ಸಂಯುಕ್ತಾಶ್ರಯದಲ್ಲಿ ಮಂಗಳೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಫುಟ್‍ಬಾಲ್ ಸ್ಪರ್ಧೆಯನ್ನು ಸೆಪ್ಟೆಂಬರ್ 2ರಂದು ಕರಾವಳಿ ಮೈದಾನದಲ್ಲಿ  ಬೆಳಿಗ್ಗೆ 8.30 ಗಂಟೆಗೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಫುಟ್‍ಬಾಲ್ ಸ್ಪರ್ಧೆ (ಪುರುಷರಿಗೆ ಮಾತ್ರ) ಯನ್ನು ಸೆಪ್ಟೆಂಬರ್ 6 ರಂದು ನಗರದ ಮಂಗಳಾ ಕ್ರೀಡಾಂಗಣ ಸಂಕೀರ್ಣದಲ್ಲಿರುವ ಕರಾವಳಿ ಮೈದಾನದಲ್ಲಿ ಸಂಘಟಿಸಲಾಗುತ್ತದೆ.
ಈಗಾಗಲೇ ಮೊಬೈಲ್ ಆ್ಯಪ್/ವೆಬ್ ಪೋರ್ಟಲ್  https://dasaracmcup.2025.etrpindia.com/KA-sports ಅಥವಾ ಕ್ಯೂ ಆರ್ ಕೋಡ್‍ನಲ್ಲಿ ಭರ್ತಿಮಾಡಿ ಮಂಗಳೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ   ಫುಟ್‍ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸುವ ಮಂಗಳೂರು ತಾಲೂಕಿನ ಪುರುಷ ಕ್ರೀಡಾಪಟುಗಳು ಸೆಪ್ಟೆಂಬರ್ 2 ರಂದು ಬೆಳಿಗ್ಗೆ 8.30 ಗಂಟೆಗೆ ಕರಾವಳಿ ಮೈದಾನದಲ್ಲಿ ಹಾಜರಾಗುವಂತೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಫುಟ್‍ಬಾಲ್  ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳು ದಕ್ಷಿಣ  ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಫುಟ್‍ಬಾಲ್ ಸ್ಪರ್ಧೆಯಲ್ಲಿ  ಭಾಗವಹಿಸಲು ಅರ್ಹರಾಗಿದ್ದು, ಕ್ರೀಡಾಪಟುಗಳು ಸೆಪ್ಟೆಂಬರ್ 6 ರಂದು  ಬೆಳಿಗ್ಗೆ  8.30 ಗಂಟೆಗೆ ನಗರದ  ಮಂಗಳಾ ಕ್ರೀಡಾಂಗಣ  ಸಂಕೀರ್ಣದ  ಕರಾವಳಿ ಮೈದಾನದಲ್ಲಿ  ಹಾಜರಾಗಬೇಕು.

ಹೆಚ್ಚಿನ ಮಾಹಿತಿಗೆ ಮಂಗಳಾ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರನ್ನು   (ದೂರವಾಣಿ ಸಂಖ್ಯೆ: 0824-2451264) ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top