IPL 2026: ಕೆಎಲ್‌ ರಾಹುಲ್‌ ಖರೀದಿಗೆ ಮುಂದಾದ ಕೋಲ್ಕತ್ತಾ..!

(ನ್ಯೂಸ್‌ ಕಡಬ) newskadaba.com, ಆ.28:‌‌ ಮುಂದಿನ ಸೀಸನ್ಗಾಗಿ ಕೋಲ್ಕತ್ತಾ ನೈಟ್ರೈಡರ್ಸ್ಫ್ರಾಂಚೈಸಿ ಹೊಸ ನಾಯಕನ ಹುಡುಕಾಟದಲ್ಲಿದೆ. ಹಾಗಾಗಿ ಕೋಲ್ಕತ್ತಾ ಕೆಎಲ್ರಾಹುಲ್ಅವರನ್ನು ಟ್ರೇಡ್ಮಾಡಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ಜೊತೆ ಮಾತುಕತೆ ಮುಂದುವರೆಸಿದೆ ಎಂದು ವರದಿಯಾಗಿದೆ.

ಕಳೆದ ಸೀಸನ್ನಲ್ಲಿ ಅಂಜಿಕ್ಯ ರಹಾನೆ ಮುಂದಾಳತ್ವದಲ್ಲಿ ಕಣಕ್ಕಿಳಿದಿದ್ದ ಕೆಕೆಆರ್ನಿರೀಕ್ಷಿತವಾದ ಪ್ರದರ್ಶನ ನೀಡಿರಲಿಲ್ಲ. ಹಾಗಾಗಿ ಮುಂದಿನ ಐಪಿಎಲ್ಹರಾಜಿಗೂ ಮುನ್ನ ಕೆಲ ಆಟಗಾರರನ್ನು ತಂಡದಿಂದ ಕೈಬಿಡಲು ತೀರ್ಮಾನಿಸಿದೆ.

ಮುಂದಿನ ಸೀಸನ್ಗೆ ಕೆಕೆಆರ್ತಂಡಕ್ಕೆ ಉತ್ತಮ ನಾಯಕನ ಅವಶ್ಯಕತೆ ಇದೆ. ಇದರೊಂದಿಗೆ ವಿಕೆಟ್ಕೀಪರ್ಬ್ಯಾಟರ್ ಅಗತ್ಯವೂ ಇದೆ. ಅಲ್ಲದೇ, ತಂಡಕ್ಕೆ ಅತ್ಯುತ್ತಮ ಆರಂಭಿಕನ ಅವಶ್ಯಕತೆ ಇದೆ. ಕೆಎಲ್ರಾಹುಲ್ಅವರನ್ನು ಟ್ರೇಡ್ಮಾಡಿಕೊಂಡರೆ ಮೂರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಹಾಗಾಗಿ ಇದೀಗ ಕೆಕೆಆರ್ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ನೊಂದಿಗೆ ಟ್ರೇಡಿಂಗ್ಮಾತುಕತೆ ನಡೆಸುತ್ತಿದೆ. ಅಲ್ಲದೇ, ಕೆಎಲ್ರಾಹುಲ್ಅವರಿಗಾಗಿ ಕೋಲ್ಕತ್ತಾ ಫ್ರಾಂಚೈಸಿ ಬರೋಬ್ಬರಿ 25 ಕೋಟಿ ರೂ. ವ್ಯಯಿಸಲು ಸಿದ್ದವಾಗಿ ಎಂಬ ಮಾತುಗಳು ಕೇಳಿಬರುತ್ತಿವೆ.

Scroll to Top