ಭಾರತ ಎ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹಿಟ್‌ಮ್ಯಾನ್..!‌

(ನ್ಯೂಸ್‌ ಕಡಬ) newskadaba.com, ಆ.23:‌‌ ಭಾರತ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವಣ ಏಕದಿನ ಸರಣಿಯು ಆ.19ರಿಂದ ಆರಂಭವಾಗಲಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಭಾರತ ಎ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ.

ಏಕೆಂದರೆ, ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿಯ ಬಳಿಕ ಭಾರತದ ಏಕದಿನ ನಾಯಕ ರೋಹಿತ್‌ ಶರ್ಮಾ ಯಾವುದೇ ಅಂತರಾಷ್ಟ್ರೀಯ ಕ್ರಿಕೆಟ್‌ ಆಡಿಲ್ಲ. ಐಪಿಎಲ್‌ ಬಳಿಕ ಅವರು ಯಾವುದೇ ಪಂದ್ಯದಲ್ಲೂ ಕಾಣಿಸಿಕೊಂಡಿಲ್ಲ.

ಮುಂಬರುವ ಸರಣಿಗಾಗಿ ಹಿಟ್‌ ಮ್ಯಾನ್‌ ಫಿಟ್‌ನೆಸ್‌ ತರಬೇತಿಯನ್ನು ಆರಂಭಿಸಿದ್ದಾರೆ. ಟೀಂ ಇಂಡಿಯಾದ ಮಾಜಿ ಸಹಾಯಕ ಕೋಚ್‌ ಅಭಿಷೇಕ್‌ ನಾಯರ್‌ ಜೊತೆ ರೋಹಿತ್‌ ಶರ್ಮಾ ಜಿಮ್‌ನಲ್ಲಿ ಬೆವರಿಳಿಸಲಾರಂಭಿಸಿದ್ದು, ಈ ಮೂಲಕ ಅವರು ಫಿಟ್‌ನೆಸ್‌ನತ್ತ ಹೆಚ್ಚಿನ ಗಮನಹರಿಸಲು ಮುಂದಾಗಿದ್ದಾರೆ.

ಅಕ್ಟೋಬರ್‌ನಲ್ಲಿ ಟೀಂ ಇಂಡಿಯಾವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಯಲ್ಲಿ 3 ಏಕದಿನ ಪಂದ್ಯಗಳು ಹಾಗೂ 5 ಟಿ20 ಪಂದ್ಯಗಳನ್ನು ಆಡಲಾಗುತ್ತದೆ. ಈ ಸರಣಿಗೂ ಮೊದಲು ಭಾರತ ಎ ತಂಡ ಆಸ್ಟ್ರೇಲಿಯಾದಲ್ಲಿ ಆಡಲಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿ:

ಅಕ್ಟೋಬರ್ 19: ಮೊದಲ ಏಕದಿನ ಪಂದ್ಯ–ಪರ್ತ್‌ ಕ್ರೀಡಾಂಗಣ, ಪರ್ತ್‌

ಅಕ್ಟೋಬರ್ 23: 2ನೇ ಏಕದಿನ ಪಂದ್ಯ–ಅಡಿಲೇಡ್‌ ಓವಲ್‌

ಅಕ್ಟೋಬರ್ 25: 3ನೇ ಏಕದಿನ ಪಂದ್ಯ–ಸಿಡ್ನಿ ಕ್ರಿಕೆಟ್‌ ಮೈದಾನ, ಸಿಡ್ನಿ

ಅಕ್ಟೋಬರ್ 29: ಮೊದಲ ಟಿ20 ಪಂದ್ಯ–ಮನುಕಾ ಓವಲ್‌, ಕ್ಯಾನ್‌ಬೆರಾ

ಅಕ್ಟೋಬರ್ 31: 2ನೇ ಟಿ20 ಪಂದ್ಯ–ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನ

ನವೆಂಬರ್ 2: 3ನೇ ಟಿ20 ಪಂದ್ಯ–ಬೆಲ್ಲರಿವ್‌ ಓವಲ್‌, ಹೋಬಾರ್ಟ್‌

ನವೆಂಬರ್ 6: 4ನೇ ಟಿ20 ಪಂದ್ಯ–ಗೋಲ್ಡ್‌ ಕೋಸ್ಟ್‌ ಕ್ರೀಡಾಂಗಣ, ಕ್ಯಾರಾರಾ

ನವೆಂಬರ್‌ 8: 5ನೇ ಟಿ20 ಪಂದ್ಯ–ದಿ ಗಬ್ಬಾ, ಬ್ರಿಸ್ಬೇನ್‌‌

Scroll to Top