ಪ್ರತಿನಿತ್ಯ ಖರ್ಜೂರ ತಿನ್ನುವ ಅಭ್ಯಾಸ ಮಾಡಿಕೊಳ್ಳಿ…

(ನ್ಯೂಸ್‌ ಕಡಬ) newskadaba.com, ಆ.23:‌‌ ಪ್ರತಿನಿತ್ಯ ಒಂದು ಖರ್ಜೂರ ಸೇವನೆ ಮಾಡುವುದರಿಂದ ದೇಹದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೇ ಖರ್ಜೂರ ಸೇವನೆಯು ಅನೇಕ ರೀತಿಯ ಆರೋಗ್ಯ ಸಮಸ್ಯೆಗೂ ರಾಮಬಾಣವಾಗಿದೆ. ಹಾಗಾಗಿ ದಿನಕ್ಕೆ ಒಂದಾದರೂ ಖರ್ಜೂರ ಸೇವನೆ ಮಾಡುವುದು ಒಳ್ಳೆಯದು. ಹಾಗಾದರೆ ಇದು ಯಾರಿಗೆ ಒಳ್ಳೆಯದು, ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.

ಖರ್ಜೂರದಲ್ಲಿ ಫೈಬರ್ಅಂಶ ಹೇರಳವಾಗಿದ್ದು, ಇದು ಹೊಟ್ಟೆಯನ್ನು ಶುದ್ದೀಕರಿಸಲು ಹಾಗೂ ಮಲಬದ್ದತೆ ಸಮಸ್ಯೆಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ.

ರಂಜಕ, ಕ್ಯಾಲ್ಸಿಯಂ ಹಾಗೂ ಮೆಗ್ನೀಸಿಯಂ ಅಂಶವನ್ನು ಹೊಂದಿರುವ ಖರ್ಜೂರ ಮೂಳೆಗಳ ಆರೋಗ್ಯಕ್ಕೆ ಪ್ರಯೋಜನಕಾರಿ. ಅಲ್ಲದೇ, ಇದು ಸಂಧಿವಾತದಂತ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

ಖರ್ಜೂರದ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ಕಡಿಮೆಯಾಗುತ್ತದೆ ಹಾಗೂ ರಕ್ತ ಪರಿಚಲನೆ ಸುಧಾರಿಸುತ್ತದೆ. ಖರ್ಜೂರವು ಉತ್ಕರ್ಷಣ ನಿರೋಧಕಗಳು, ವಿಟಮಿನ್ಬಿ6 ಹಾಗೂ ಕಬ್ಬಿಣವನ್ನು ಹೊಂದಿರುತ್ತದೆ. ಇವು ದೇಹವನ್ನು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಖರ್ಜೂರ ಸೇವನೆಯು ಚರ್ಮದ ಆರೋಗ್ಯ ಕಾಪಾಡಲು ಸಹಕಾರಿ. ಹಾಗಾಗಿ, ಕೇವಲ ಒಂದು ಖರ್ಜೂರ ತಿನ್ನುವುದರಿಂದ ದೇಹಕ್ಕೆ ಪೋಷಕಾಂಶಗಳು, ಶಕ್ತಿ ಹಾಗೂ ಉತ್ತಮ ಆರೋಗ್ಯ ದೊರೆಯುತ್ತದೆ.

ಖರ್ಜೂರದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಂ ಹಾಗೂ ಪೊಟ್ಯಾಸಿಯಂನಂತ ಖನಿಜಗಳು ಹೇರಳವಾಗಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಶೀತ, ಕೆಮ್ಮು ಹಾಗೂ ವೈರಲ್ಸೋಕುಗಳಂತ ಕಾಯಿಲೆಗಳಿಂದ ರಕ್ಷಣೆ ಮಾಡುತ್ತವೆ.

Scroll to Top