ಅಮೇರಿಕಾದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

(ನ್ಯೂಸ್‌ ಕಡಬ) newskadaba.com, ಆ.22: ಅಮೇರಿಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 7.5ರಷ್ಟು ದಾಖಲಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಈ ಭೂಕಂಪವು ಭಾರತೀಯ ಸಮಯ 07.46ಕ್ಕೆ ಸಂಭವಿಸಿದೆ. ಇದರ ಕೇಂದ್ರಬಿಂದ ಡ್ರೇಕ್‌ ಪ್ಯಾಸೇಜ್‌ನಲ್ಲಿದೆ.

ಯುನೈಟೆಡ್‌ ಸ್ಟೇಟ್ಸ್‌ ಭೂವೈಜ್ಞಾನಿಕ ಸಮೀಕ್ಷೆ ಆರಂಭಿಕಯ ಆರಂಭಿಕ ವರದಿಗಳು ಭೂಕಂಪದ ತೀವ್ರತೆಯನ್ನು 8.0 ಎಂದು ಹೇಳಿದ್ದವು. ದಕ್ಷಿಣ ಅಮೇರಿಕಾ ಹಾಗೂ ಅಂಟಾರ್ಟಿಕಾ ಟೆಕ್ಟೋನಿಕ್‌ ಪ್ಲೇಟ್‌ಗಳ ಜಂಕ್ಷನ್‌ನಲ್ಲಿ ಈ ಪ್ರದೇಶ ಇರುವುದರಿಂದ ಕಂಪನಗಳು ಹೆಚ್ಚಿವೆ.

ಭೂಕಂಪನದ ಬಳಿಕ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಘಟನೆಯಲ್ಲಿ ಯಾವುದೇ ದೊಡ್ಡ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

Scroll to Top