ಕೇರಳ : ಮನೆಗೆ ನುಗ್ಗಿ ಮಹಿಳೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ದುಷ್ಕರ್ಮಿ



(ನ್ಯೂಸ್‌ ಕಡಬ) newskadaba.com, ಆ.20: ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಕೇರಳದ ಕಣ್ಣೂರು ಜೆಲ್ಲೆ ಕುಟ್ಟಿಯತ್ತೂರ್‌ಬಳಿಯ ಉರುವಾಂಚಲ್‌ನಲ್ಲಿ ನಡೆದಿದೆ. ಪ್ರವೀಣಾ(39) ಕೊಲೆಯಾದ ಮಹಿಳೆ ದುಷ್ಕರ್ಮಿ ನೀರು ಕೇಳುವ ನೆಪದಲ್ಲಿನ ಮನೆಗೆ ನುಗ್ಗಿ ಆಕೆಯನ್ನು ಸುಟ್ಟು ಹಾಕಿದ್ದಾರೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





ಘಟನೆ ನಡೆದ ಸಮಯದಲ್ಲಿ ಪ್ರವೀಣಾ ಅವರ ಮಾವ,ಅತ್ತೆ ಹಾಗೂ ಅವರ ಅತ್ತಿಗೆಯ ಮಕ್ಕಳು ಮನೆಯಲ್ಲಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.ಪ್ರವೀಣಾ ಅವರ ಪತಿ ಅಜೀಜ್‌ ವಿದೇಶದಲ್ಲಿದ್ದಾರೆ.ಜಿಜೇಶ್‌ ಎಂಬಾತ ಅತಿಕ್ರಮಣ ಮಾಡಿ ಪ್ರವೀಣಾ ಅವರಿಗೆ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗುತ್ತಿದ್ದು ಆತನಿಗೂ ಸುಟ್ಟ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.






ಜಿಜೇಶ್‌ ಮೊದಲು ಮನೆ ಬಾಗಿಲಿಗೆ ಬಂದು ನೀರು ಕೇಳಿದ್ದಾನೆ ನಂತರ, ಮನೆಗೆ ಪ್ರವೇಶಿಸಿ ಅಡುಗೆ ಮನೆಗೆ ಪ್ರವೀಣಾ ನಡೆದುಕೊಂಡು ಹೋಗುತ್ತಿದ್ದಾಗ ತಂದಿದ್ದ ಪೆಟ್ರೋಲ್‌ ಬಾಟಲಿಯನ್ನು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ.

error: Content is protected !!
Scroll to Top