ಪ್ರಾಕೃತಿಕ ವಿಕೋಪದಿಂದ ಕೃಷಿ ನಾಶ – ನಷ್ಟಗಳಿಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಪರಿಹಾರ ಒದಗಿಸಬೇಕು- ಎಂ.ಎ. ರಫೀಕ್



(ನ್ಯೂಸ್ ಕಡಬ) newskadaba.com ಸವಣೂರು, ಆ. 20. ದಕ್ಷಿಣ ಕನ್ನಡ ಜಿಲ್ಲೆಯ ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ಸಂಭವಿಸಿದ ಭೀಕರ ಗಾಳಿಗೆ ಗ್ರಾಮದ ಇಡ್ಯಾಡಿ, ಅತಿಕರೆ, ಆರೆಲ್ತಡಿ, ಕೆಡೆಂಜಿ ಹಾಗೂ ಇನ್ನೂ ಅನೇಕ ಸ್ಥಳಗಳಲ್ಲಿ ಜೀವನ ನಡೆಸಲು ಆದಾಯದ ಮೂಲವಾಗಿರುವ
ಅಡಿಕೆ ಮತ್ತು ತೆಂಗು ಕೃಷಿಕರು ಕಷ್ಟಪಟ್ಟು ಬೆಳೆಸಿದ ಬಹಳಷ್ಟು ಜನರ ಕೃಷಿಯು ಸಂಪೂರ್ಣ ನಾಶವಾಗಿರುತ್ತದೆ.





ಇದು ಒಂದು ಪ್ರಾಕೃತಿಕ ವಿಕೋಪವಾಗಿದ್ದು, ರಾಜ್ಯ ಸರ್ಕಾರದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ಈಗ ಪರಿಹಾರಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಈ ರೀತಿಯ ಕೃಷಿ ನಾಶಗಳನ್ನು ಕೂಡ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯ ಅಡಿಯಲ್ಲಿ ತರಬೇಕು. ಅಥವಾ ತುರ್ತಾಗಿ ಸರಕಾರ ತೋಟಗಾರಿಕೆ ಇಲಾಖೆಯ ಮೂಲಕ ಕೃಷಿ ನಾಶ ನಷ್ಟ ಅನುಭವಿಸಿರುವ ಕೃಷಿಕರಿಗೆ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರವನ್ನು ಒದಗಿಸಬೇಕೆಂದು ಸರಕಾರವನ್ನು, ಸಂಬಂಧಪಟ್ಟ ಸಚಿವರನ್ನು, ತೋಟಗಾರಿಕೆ ಇಲಾಖೆಯನ್ನು ಕೃಷಿಕರ ಯೋಗಕ್ಷೇಮವನ್ನು ಮುಂದಿಟ್ಟುಕೊಂಡು ಎಸ್ಡಿಪಿಐ ಬೆಳ್ಳಾರೆ ಬ್ಲಾಕ್ ಅಧ್ಯಕ್ಷ ಎಂ.ಎ.ರಪೀಕ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.






error: Content is protected !!
Scroll to Top