ಲಾಯಿಲ: ಬೈಕ್ ಸ್ಕಿಡ್ ► ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.15. ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಎಂಬಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.

ಮೃತ ಸವಾರನನ್ನು ಬೆಳ್ತಂಗಡಿ ಕೋರ್ಟ್ ರಸ್ತೆಯ ನಿವಾಸಿ, ಲಾಯಿಲದ ಬ್ರದರ್ಸ್ ಗ್ಯಾರೇಜಿನ ಮಾಲಕ ಮುಹಮ್ಮದ್ ಹನೀಫ್ (48) ಎಂದು ಗುರುತಿಸಲಾಗಿದೆ. ಅವರು ಶನಿವಾರ ತಡರಾತ್ರಿ ತನ್ನ ಸ್ನೇಹಿತನೊಬ್ಬನನ್ನು ಆತನ ಮನೆಗೆ ಬಿಟ್ಟು ಹಿಂದಿರುಗುತ್ತಿದ್ದಾಗ ಲಾಯಿಲ ಗ್ರಾಮದ ಪಡ್ಲಾಡಿ ಸಮೀಪದ ಅಗಳಿ ಎಂಮಬಲ್ಲಿಗೆ ತಲುಪಿದಾಗ ಬೈಕ್‌ ಸ್ಕಿಡ್ ಆಗಿ ಬಿದ್ದಿದ್ದರಿಂದಾಗಿ ಹನೀಫ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಕಡಬ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ► ಶಿವಮೊಗ್ಗ ಜಿ.ಪಂ.ಸದಸ್ಯ ಮಂಜುನಾಥ ನಾಯ್ಕ್‌ ಭೇಟಿ

error: Content is protected !!
Scroll to Top