ಕಡಬ: ಶತಾಯುಷಿ 107 ವರ್ಷ ಪ್ರಾಯದ ಲಕ್ಷ್ಮೀ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಆ.14. ಶತಾಯುಷಿ ಮಹಿಳೆಯೋರ್ವರು ಅಲ್ಪಕಾಲದ ಅಸೌಖ್ಯದಿಂದ ಮೃತಪಟ್ಟ ಘಟನೆ ಕಡಬ ತಾಲೂಕಿನ ಬಿಳಿನೆಲೆಯಲ್ಲಿ ಗುರುವಾರದಂದು ನಡೆದಿದೆ.

 

ಬಿಳಿನೆಲೆ ಗ್ರಾಮದ ಒಗ್ಗು ನಿವಾಸಿ ದಿ. ಕೂಸಪ್ಪ ಗೌಡ ಎಂಬವರ ಪತ್ನಿ ಲಕ್ಷ್ಮೀ ಮೃತ ಮಹಿಳೆಯಾಗಿದ್ದಾರೆ. ಅವರಿಗೆ 107 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಮೃತರು ಪುತ್ರರಾದ ಬಾಲಕೃಷ್ಣ ಗೌಡ, ಗೋಪಾಲ ಗೌಡ, ಸಿಪಿಸಿಆರ್ಐ ಉದ್ಯೋಗಿಗಳಾದ ಬಾಳಪ್ಪ ಗೌಡ, ಚೆನ್ನಪ್ಪ ಗೌಡ, ಜತ್ತಪ್ಪ ಗೌಡ ಹಾಗೂ ಪುತ್ರಿಯರಾದ ಲಲಿತಾ, ಶಿವಮ್ಮ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Scroll to Top