ಇಂದಿನಿಂದ ಲಾಲ್‌ಬಾಗ್‌ನಲ್ಲಿ ಫ್ಲವರ್‌ ಶೋ



(ನ್ಯೂಸ್‌ ಕಡಬ) newskadaba.com, ಆ.07:‌ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ಇಂದಿನಿಂದ ಬೆಂಗಳೂರಿನ ಲಾಲ್ಬಾಗ್ನಲ್ಲಿ ಫ್ಲವರ್ಶೋ ಆರಂಭಗೊಳ್ಳಲಿದೆ. ಫ್ಲವರ್ಶೋ 12 ದಿನ ಪ್ರದರ್ಶನಗೊಳ್ಳಲಿದೆ.







ತೋಟಗಾರಿಕಾ ಇಲಾಖೆ ನಡೆಸುವ 218ನೇ ಫಲಪುಷ್ಪ ಪ್ರದರ್ಶನದಲ್ಲಿ ಕಿತ್ತೂರಿನ ವೀರ ಪರಂಪರೆ ಅನಾವರಣಗೊಳ್ಳಲಿದೆ. ಬೆಳಗ್ಗೆ 10 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಗಾಜಿನ ಮನೆಯಲ್ಲಿ ಫ್ಲವರ್ಶೋಗೆ ಚಾಲನೆ ನೀಡಲಿದ್ದಾರೆ. 12 ದಿನಗಳ ಪ್ರದರ್ಶನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ.






ಕಿತ್ತೂರು ಸಂಸ್ಥಾನದ ಕೋಟೆಯ ಪ್ರಾತಿನಿಧಿಕ ಪುಷ್ಪ ಮಾದರಿ, ರಾಣಿ ಚೆನ್ನಮ್ಮ ಹಾಗೂ ರಾಯಣ್ಣನ ಪ್ರತಿಮೆಗಳು, ಕೋಟೆ ವಿನ್ಯಾಸದ ವರ್ಟಿಕಲ್ಗಾರ್ಡನ್‌, ರಾಯಣ್ಣ ಹುತಾತ್ಮರಾಗುವ ಸನ್ನಿವೇಶದ ಹೂ ಜೋಡಣೆ, ವೀರವನಿತೆಯರ ಕಲಾಕೃತಿಗಳಿವೆ. ಇದಕ್ಕೆ 109 ಪ್ರಭೇದದ 30 ಲಕ್ಷಕ್ಕೂ ಅಧಿಕ ಹೂಗಳನ್ನು ಬಳಸಲಾಗುತ್ತಿದ್ದು, ರಾಣಿ ಚೆನ್ನಮ್ಮನ ಐಕ್ಯಸ್ಮಾರಕದ ಪುಷ್ಪ ಮಾದರಿಯೂ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

ಲಾಲ್ಬಾಗ್ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 6.30ರವರೆಗೆ ಟಿಕೆಟ್ನೀಡಲಾಗುತ್ತದೆ. ಗಾಜಿನ ಮನೆ ಪ್ರವೇಶವು ರಾತ್ರಿ 7 ಗಂಟೆವರೆಗೆ ಮಾತ್ರವೇ ಇರಲಿದೆ. ವಾರಾಂತ್ಯ ಟಿಕೆಟ್ದರ 100 ರೂ. ಹಾಗೂ 12 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 30 ರೂ. ಶುಲ್ಕವಿರುತ್ತದೆ. ಸಮವಸ್ತ್ರದಲ್ಲಿರುವ ಶಾಲಾ ವಿದ್ಯಾರ್ಥಿಗಳಿಗೆ ಎಲ್ಲಾ ದಿನಗಳಲ್ಲಿ ಉಚಿತ ಪ್ರವೇಶ ಇರಲಿದೆ.

error: Content is protected !!
Scroll to Top