ಬೆಥನಿ ಐಟಿಐಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಗೌರವ



(ನ್ಯೂಸ್ ಕಡಬ) newskadaba.com, . 01: ನೆಲ್ಯಾಡಿ: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 25 ವರ್ಷಗಳ ಸೇವೆ ಯಶಸ್ವಿಯಾಗಿ ಪೂರೈಸಿದ ಶ್ರೀ ಪ್ರಕಾಶ್ ಕೆ ವೈ ಹಾಗೂ ಶ್ರೀ ಸುನಿಲ್ ಜೋಸೆಫ್ ಅವರಿಗೆ ಗೌರವ ಸೂಚ್ಯವಾಗಿ ಅಭಿನಂದನಾ ಕಾರ್ಯಕ್ರಮವನ್ನು ಸಂಸ್ಥೆಯ ವತಿಯಿಂದ ನೆರವೇರಿಸಲಾಯಿತು.







ಈ ಭಾವಪೂರ್ಣ ಕ್ಷಣದಲ್ಲಿ ಬೆಥನಿ ವಿದ್ಯಾ ಸಂಸ್ಥೆಗಳು ನೆಲ್ಯಾಡಿ ಇದರ ಸಂಚಾಲಕರಾದ ರೆ. ಫಾ. ಜೈಸನ್ ಸೈಮನ್ ಓಐಸಿ ಅವರು ಮಾತನಾಡಿ, “ನಿಸ್ವಾರ್ಥ ಸೇವೆಯನ್ನು 25 ವರ್ಷಗಳ ಕಾಲ ನಿರಂತರವಾಗಿ ನೀಡಿದ ಇಬ್ಬರೂ ಸಿಬ್ಬಂದಿಗಳ ಸೇವಾಭಾವನೆಯು  ಬೆಥನಿ ಸಂಸ್ಥೆಗೆ ಶಕ್ತಿಯಾಗಿದೆ,” ಎಂದು ಅಭಿನಂದನೆ ಸಲ್ಲಿಸಿದರು.






ಅದೇ ರೀತಿಯಲ್ಲಿ, ಬೆಥನಿ ಐಟಿಐಯ ನಿರ್ದೇಶಕರಾದ ರೆ. ಫಾ. ಚಾರ್ಜ್ ಸ್ಯಾಮುವೆಲ್ ಓಐಸಿ ಮತ್ತು ಪ್ರಾಚಾರ್ಯರಾದ ಸಜಿ ಕೆ ಥಾಮಸ್  ತರಬೇತಿ ಅಧಿಕಾರಿ ಜೋನ್ ಪಿ ಎನ್ , ಸಿಬ್ಬಂದಿ ವಿಭಾಗದ ಕಾರ್ಯದರ್ಶಿ ಹರಿಪ್ರಸಾದ್ ರೈ ಅವರು ಮಾತನಾಡಿ, “ಬಹಳ ಪ್ರಾಮಾಣಿಕತೆ, ಶ್ರದ್ಧೆ ಮತ್ತು ಉತ್ಸಾಹದಿಂದ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ಇಬ್ಬರು ಸಿಬ್ಬಂದಿಗಳ ತ್ಯಾಗ ಮತ್ತು ನಿಷ್ಠೆ ಇತರರಿಗೂ ಮಾದರಿಯಾಗಿದೆ,” ಎಂದು ಅವರು ಹೇಳಿದರು.

error: Content is protected !!
Scroll to Top