ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಇನ್ನೂ ಫೈನಲ್ ಆಗಿಲ್ಲ ; ಟ್ರಂಪ್‌



(ನ್ಯೂಸ್ ಕಡಬ) newskadaba.com, ಜು. 30. ಭಾರತವು ಯಾವುದೇ ಇತರ ದೇಶಗಳಿಗಿಂತ ಹೆಚ್ಚಿನ ಸುಂಕಗಳನ್ನು ವಿಧಿಸುತ್ತದೆ ಹೀಗಾಗಿ ಆ ದೇಶದೊಂದಿಗಿನ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.







ಸ್ಕಾಟ್ಲೆಂಡ್‌ನಿಂದ ವಾಷಿಂಗ್ಟನ್‌ಗೆ ಹಿಂತಿರುಗುವಾಗ ಏರ್‌ ಫೋರ್ಸ್‌ ಒನ್‌ನಲ್ಲಿ ಪತ್ರಕರ್ತರು ಭಾರತದೊಂದಿಗಿನ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆಯೇ ಎಂದು ಕೇಳಿದಾಗ ಟ್ರಂಪ್‌ ಇಲ್ಲ ಇನ್ನು ಅಂತಿಮಗೊಳಿಸಲಾಗಿಲ್ಲ ಎಂದು ತಿಳಿಸಿದರು.






ಭಾರತವು ಶೇ. 20-25 ರಷ್ಟು ಹೆಚ್ಚಿನ ಯುಎಸ್‌‍ ಸುಂಕಗಳನ್ನು ಎದುರಿಸಲು ತಯಾರಿ ನಡೆಸುತ್ತಿದೆ ಎಂಬ ವರದಿಗಳ ಬಗ್ಗೆಯೂ ಅವರನ್ನು ಕೇಳಲಾಯಿತು, ಅದಕ್ಕೆ ಅವರು ಹೌದು, ನಾನು ಭಾವಿಸುತ್ತೇನೆ ಎಂದು ಉತ್ತರಿಸಿದರು

error: Content is protected !!
Scroll to Top