(ನ್ಯೂಸ್ ಕಡಬ) newdkadaba.com ಜು. 25. ಗುಂಡ್ಯದಲ್ಲಿ ಆನೆ ಶಿಬಿರ ಸ್ಥಾಪನೆಗೆ ಸಿದ್ಧತೆ, ಕಾಡು ಪ್ರಾಣಿಗಳಿಂದ ಕೃಷಿ ಹಾಗೂ ಜೀವಕ್ಕೆ ಹಾನಿ, ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಿಸಲು ನಿಷೇಧ, ಜಾಗದ ಫ್ಲೋಟಿಂಗ್ ಸಮಸ್ಯೆ, ರೈತರ ಉಳಿವಿಗಾಗಿ ಮತ್ತು ಗ್ರಾಮೀಣ ಪ್ರದೇಶದ ಜನರ ಸಂರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರನ್ನು ಜಾಗೃತಗೊಳಿಸಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ” ಎಂದು ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ ಹೇಳಿದ್ದಾರೆ.
ಅರಣ್ಯ ಇಲಾಖೆಯ ಕಾನೂನಿಂದ ಜನರಿಗೆ ಆಗುವ ಮಾನಸಿಕ ಹಿಂಸೆಯಿಂದ ರೈತರನ್ನು ಪಾರು ಮಾಡುವ ಹಿನ್ನೆಲೆ ಜುಲೈ 30ರಂದು ಸಮಾಲೋಚನಾ ಸಭೆಯನ್ನು ಕುಕ್ಕೆ ಸುಬ್ರಹ್ಮಣ್ಯದ ಐನೆಕಿದು ಸೊಸೈಟಿ ಬಳಿ ನಡೆಸುವುದೆಂದು ತೀರ್ಮಾನಿಸಲಾಗಿದೆ. ಈ ಸಭೆಗೆ ವಿವಿಧ ಧಾರ್ಮಿಕ ಪ್ರಮುಖರು, ಎಲ್ಲಾ ರಾಜಕೀಯ ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು, ಊರಿನ ಗಣ್ಯರು ಬಂದು ರೈತರ ಉಳಿವಿಗಾಗಿ ಮತ್ತು ಗ್ರಾಮೀಣ ಪ್ರದೇಶದ ಜನರ ಸಂರಕ್ಷಣೆಗಾಗಿ ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರನ್ನು ಜಾಗೃತಗೊಳಿಸಿ ಉಗ್ರ ಹೋರಾಟ ಮಾಡಲು ತಾವುಗಳು ಸಲಹೆ ಸೂಚನೆ ನೀಡಬೇಕಾಗಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕರಾದ ಕಿಶೋರ್ ಶಿರಾಡಿ ವಿನಂತಿಸಿದ್ದಾರೆ.









