ಎಸ್ಎಸ್ಎಫ್ ಆತೂರು ಸೆಕ್ಟರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ



(ನ್ಯೂಸ್ ಕಡಬ) newskadaba.com ಆತೂರು, ಜು. 21. ಎಸ್ಎಸ್ಎಫ್ ಆತೂರು ಸೆಕ್ಟರ್ ಇದರ ವತಿಯಿಂದ ಕರ್ನಾಟಕ ರಾಜ್ಯ ಎಸ್ಎಸ್ಎಫ್ ಬ್ಲಡ್ ಸೈಬೋ ಇದರ 362ನೇ ರಕ್ತದಾನ ಶಿಬಿರವು ಇಲ್ಲಿನ ಕೊಯಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.







 

ರಕ್ತದಾನ ಮಹಾ ದಾನವಾಗಿದೆ. ಕಳೆದ ಹಲವಾರು ವರ್ಷಗಳಿಂದ ಎಸ್ಎಸ್ಎಫ್ ರೋಗಿಗಳ ಪಾಲಿಗೆ ಬೆಳಕಾಗುತ್ತಲಿದೆ. ರಕ್ತದೊತ್ತಡ ರಾಜ್ಯದಾದ್ಯಂತ ತೀವ್ರವಾಗಿರುವಾಗ ನಮಗೆಲ್ಲರಿಗೂ ಬ್ಲಡ್ ಸೈಬೋ ಮೇಲೆ ನಿರೀಕ್ಷೆ ಮತ್ತು ಭರವಸೆಯಿದೆ ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕೋರ್ಡಿನೇಟರ್ ಪ್ರವೀಣ್ ಅವರು ಅಭಿಪ್ರಾಯಪಟ್ಟರು.






ಕಾರ್ಯಕ್ರದಲ್ಲಿ ಸುಮಾರು 52 ಮಂದಿ ಸ್ವ-ಇಚ್ಛೆಯಿಂದ ರಕ್ತದಾನ ಮಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಮಾದಕದ್ರವ್ಯ ವಿರುದ್ದ ಪ್ರತಿಜ್ಞೆ ಮತ್ತು ಕರಪತ್ರ ವಿತರಣೆ ಮಾಡಲಾಯಿತು. ಸುನ್ನೀ ಕೋರ್ಡಿನೇಷನ್ ಆತೂರು ಇದರ ಕೋಶಾಧಿಕಾರಿ ರಝಾಕ್ ನೇರಂಕಿ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಅಬೂಬಕರ್ ಸಅದಿ ಮಜೂರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಡಿ.ಎ ಅಬೂಬಕ್ಕರ್ ಹಾಜಿ, ಅಬ್ದುಲ್ಲ ಕುಂಞಿ ಆಲಂಕಾರು, ಇಬ್ರಾಹಿಂ ಹಾಜಿ ಕುದ್ಲೂರು, ವೈ ಇಬ್ರಾಹಿಂ, ಅಬ್ಬಾಸ್ ಮಿಸ್ಬಾಹಿ, ಮಅ್ ರೂಫ್ ಸುಲ್ತಾನಿ ಮುಂತಾದವರು ಉಪಸ್ಥಿತರಿದ್ದರು.

error: Content is protected !!
Scroll to Top