ಕೋವಿಡ್‌, ಲಸಿಕೆಯಿಂದ ನರಮಂಡಲಕ್ಕೆ ಸಮಸ್ಯೆ: ನಿಮ್ಹಾನ್ಸ್‌ ಸಂಶೋಧನಾ ವರದಿ ಬಹಿರಂಗ



(ನ್ಯೂಸ್ ಕಡಬ) newskadaba.com,ಜು .17. ಸಂಶೋಧನೆಗಳಿಂದ ಕೋವಿಡ್‌-19 ಸೋಂಕು ಮತ್ತು ಕೋವಿಡ್‌ ಲಸಿಕೆಯಿಂದ ಮಾನವನ ನರಮಂಡಲ ಮತ್ತು ಮೆದುಳಿನ ಮೇಲೆ ನೇರ ಪರಿಣಾಮ ಆಗಿರುವುದು ಪತ್ತೆಯಾಗಿದೆ ಎಂದು ನಿಮ್ಹಾನ್ಸ್‌ ವೈದ್ಯರ ಸಂಶೋಧನಾ ವರದಿ ಬಹಿರಂಗಪಡಿಸಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌)ಯ ನರ ರೋಗ ತಜ್ಞೆ ಡಾ। ಎಂ.ನೇತ್ರಾವತಿ ಅವರ ನೇತೃತ್ವದಲ್ಲಿ ನಡೆದಿರುವ ಅಧ್ಯಯನದಲ್ಲಿ ಈ ಮಾಹಿತಿ ಹೊರಬಿದ್ದಿದೆ. ಕೋವಿಡ್‌ ಸೋಂಕಿನ ಮೊದಲ ಅಲೆ ಮತ್ತು ನಂತರ ನೀಡಲಾಗಿದ್ದ ಕೋವಿಡ್ ಲಸಿಕೆಯಿಂದ ನರಮಂಡಲದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಿದೆ ಎನ್ನುವ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿತ್ತು.





ನಿಮ್ಹಾನ್ಸ್‌ನಲ್ಲಿ 2020ರ ಮಾರ್ಚ್‌ ಮತ್ತು ಸೆಪ್ಟೆಂಬರ್‌ ಮಧ್ಯೆ ದಾಖಲಾಗಿದ್ದ 3200 ನರರೋಗಿ ಸಂಬಂಧಿತ ರೋಗಿಗಳನ್ನು ಅದ್ಯಯನಕ್ಕೆ ಒಳಪಡಿಸಲಾಗಿದ್ದು, ಈ ಪೈಕಿ 120 ಮಂದಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದರು. ಅಲ್ಲದೇ ನರ ಸಂಬಂಧಿ ಸಮಸ್ಯೆಗಳನ್ನು ಅನುಭವಿಸಿದ್ದರು. ಇವರಲ್ಲಿ ಮೂರರಿಂದ 84 ವರ್ಷದ ಒಳಗಿನವರಿದ್ದು, ಸರಾಸರಿ 49 ವಯಸ್ಸಿನವರು ಹೆಚ್ಚಿದ್ದರು. ಹೆಚ್ಚಿನ ರೋಗಿಗಳು ತೀವ್ರ ಜ್ವರದ ಜೊತೆಗೆ ಪ್ರಜ್ಞೆ ತಪ್ಪುವುದು(ಶೇ.47), ವಾಸನೆ ರಹಿತ (ಶೇ.14.2) ರೀತಿಯ ಲಕ್ಷಣಗಳನ್ನು ಹೊಂದಿದ್ದರು. ಕೋವಿಡ್‌ ವೈರಸ್‌ ಸೋಂಕಿನಿಂದಾಗಿ ನೇರವಾಗಿ ನರಮಂಡಲಕ್ಕೆ ಸಮಸ್ಯೆ ಆಗಿದೆ ಎಂದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.






ಕೋವಿಡ್‌ ಸೋಂಕಿತರು ಮತ್ತು ಕೋವಿಡ್‌ ಸೋಂಕಿಗೆ ಒಳಗಾದವರಲ್ಲಿ ನರ ಸಂಬಂಧಿ ಸಮಸ್ಯೆಗಳಿರುವುದನ್ನು ಪತ್ತೆ ಮಾಡಲಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಮೇಲೆ ದೀರ್ಘ ಕಾಲದ ನಿಗಾ ವಹಿಸುವ ಅಗತ್ಯತೆ ಇದೆ ಎಂದು ವೈದ್ಯರು ಸೂಚಿಸಿದ್ದಾರೆ. 2021ರ ಮೇ ತಿಂಗಳಿನಿಂದ ಡಿಸೆಂಬರ್‌ವರೆಗೆ ಕೋವಿಡ್‌ ಲಸಿಕೆ ಪಡೆದ 42 ದಿನಗಳ ಬಳಿಕ ನರ ರೋಗ ಸಮಸ್ಯೆಗೆ ಒಳಗಾಗಿ ನಿಮ್ಹಾನ್ಸ್‌ಗೆ ದಾಖಲಾದ 116 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಪೈಕಿ 29 ಮಂದಿಗೆ ವ್ಯಾಕ್ಸಿನ್‌ ನೀಡಿದ ಬಳಿಕ ಇಮ್ಯೂನ್‌ ಸಿಸ್ಟಂ ತೊಂದರೆಗೀಡಾಗಿ ನರರೋಗ ಸಮಸ್ಯೆ ಕಂಡು ಬಂದಿದೆ.

error: Content is protected !!
Scroll to Top