(ನ್ಯೂಸ್ ಕಡಬ) newskadaba.com ಜು.05. ಸಂಸದ ತೇಜಸ್ವಿ ಸೂರ್ಯ ಅವರ ಮನೆಗೆ ವಿಶೇಷ ಅತಿಥಿಯ ಆಗಮನವಾಗಿದೆ. ಅದನ್ನು ಅವರು ತಮ್ಮ ಪತ್ನಿ ಗಾಯಕಿ ಶಿವಶ್ರೀ ಸ್ಕಂದ ಜೊತೆ ಪ್ರೀತಿಯಿಂದ ಸ್ವಾಗತಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಂಧ್ರಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಉಡುಗೊರೆಯಾಗಿ ಸಿಕ್ಕಿದ ಕರುವನ್ನು ದಂಪತಿ ಮನೆಗೆ ತಂದಿದ್ದಾರೆ. ಶಿವಶ್ರೀ ಸ್ಕಂದ ಅವರು ತಮ್ಮ ಗಾಯನ ಮೂಲಕ ಕರುವನ್ನು ಅಪ್ಪಿ ಮುದ್ದಾಡಿದ್ದಾರೆ. ಈ ವಿಡಿಯೊವನ್ನು ತೇಜಸ್ವಿ ಸೂರ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.









