ಭಾರತೀಯ ಅಥ್ಲೆಟಿಕ್ಸ್‌ ನಲ್ಲಿ ಹೊಸ ಅಧ್ಯಾಯ ಅಂತರಾಷ್ಟ್ರೀಯ ಜಾವೆಲಿನ್ ಕೂಟ..!



(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 05. ರಾಜ್ಯ ರಾಜಧಾನಿ ಕ್ರೀಡಾಭಿಮಾನಿಗಳಿಗೆ ವಿಶ್ವದ ಶ್ರೇಷ್ಠ ಜಾವೆಲಿನ್ ಥ್ರೋ ಪಟುಗಳನ್ನು ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಸ್ಪರ್ಧಿಸುವುದನ್ನು ನೇರವಾಗಿ ನೋಡುವ ಅವಕಾಶ ಸಿಗಲಿದೆ ಎಂದು ವರದಿ ತಿಳಿಸಿದೆ.








2 ಬಾರಿ ಒಲಿಂಪಿಕ್ ಪದಕ ವಿಜೇತ, ಹಾಲಿ ವಿಶ್ವಚಾಂಪಿಯನ್, ವಿಶ್ವನಂ.1 ನೀರಜ್ ತಮ್ಮ ಹೆಸರಿನಲ್ಲಿ ಆರಂಭಿಸಿರುವ ನೀರಜ್ ಚೋಪ್ರಾ ಕ್ಲಾಸಿಕ್ ಅಂತಾರಾಷ್ಟ್ರೀಯ ಜಾವೆಲಿನ್ ಕೂಟ, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು,ನೀರಜ್ ಸೇರಿ ಭಾರತದ ಐವರು ಹಾಗೂ ಏಳು ಮಂದಿ ವಿದೇಶಿಗರು ಸೇರಿ ಒಟ್ಟು 12 ಅಫೀಟ್‌ಗಳು ಚೊಚ್ಚಲ ಆವೃತ್ತಿಯ ಎನ್‌ ಕ್ಲಾಸಿಕ್ ಚಾಂಪಿಯನ್ ಶಿಪ್‌ಗಾಗಿ ಸ್ಪರ್ಧೆಗಿಳಿಯಲಿದ್ದಾರೆ.







ವಿಶ್ವ ಅಥ್ಲೆಟಿಕ್ಸ್ ಈ ಕೂಟಕ್ಕೆ ‘ಎ’ ದರ್ಜೆ ಮಾನ್ಯತೆ ನೀಡಿದ್ದು, ಇದೇ ಮೊದಲ ಬಾರಿಗೆ ಭಾರತದಲ್ಲಿ ಅಂತರಾಷ್ಟ್ರೀಯ ಜಾವೆಲಿನ್ ಕೂಟ ನಡೆಯಲಿದೆ. ಭಾರತೀಯ ಅಥ್ಲೆಟಿಕ್ಸ್‌ ನಲ್ಲಿ ಇದೊಂದು ಹೊಸ ಅಧ್ಯಾಯ ಎನ್ನಲಾಗಿದೆ.

 

error: Content is protected !!
Scroll to Top