ಕೆಎಸ್ಸಾರ್ಟಿಸಿಯಲ್ಲಿ 726 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ‌ ಆಹ್ವಾನ ► ಬಿಎಂಟಿಸಿಯಲ್ಲಿ 100 ವಿವಿಧ ಹುದ್ದೆಗಳಿಗೂ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಉದ್ಯೋಗ ಮಾಹಿತಿ, ಎ.08. ಕೆಎಸ್ಸಾರ್ಟಿಸಿ 726 ತಾಂತ್ರಿಕ ಸಹಾಯಕ ಹುದ್ದೆ ಹಾಗೂ ಬಿಎಂಟಿಸಿ 100 ಕಿರಿಯ ಸಹಾಯಕ ಕಮ್‌ ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಎಪ್ರಿಲ್ 25 ಕೊನೆಯ ದಿನಾಂಕವಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಯಲ್ಲಿ 826 ಹುದ್ದೆಗಳ ಭರ್ತಿಗೆ ಈ ಕೆಳಗೆ ಕಾಣಿಸಿದ ದಾಖಲಾತಿಗಳು ಬೇಕಾಗಿದೆ. ಅಂಚೆ ಕಚೇರಿಯಲ್ಲಿ ಅರ್ಜಿ ಶುಲ್ಕ ಪಾವತಿಸಿದ ಚಲನ್‌ನ ಪ್ರತಿ, ಹುದ್ದೆಗೆ ನಿಗದಿ ಪಡಿಸಲಾಗಿರುವ ವಿದ್ಯಾರ್ಹತೆಯ ಅಂಕಪಟ್ಟಿ, ಜನ್ಮ ದಿನಾಂಕ ದೃಢೀಕರಣಕ್ಕಾಗಿ ಶಾಲಾ ವರ್ಗಾವಣಾ ಪ್ರಮಾಣ ಪತ್ರ / ಜನನ ಪ್ರಮಾಣ ಪತ್ರ, ಸೈನಿಕ ಸೇವೆಯಿಂದ ಬಿಡುಗಡೆಯಾದ / ಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರ (ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ), ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ, ಮತ್ತು 3ಬಿ ಮೀಸಲಾತಿ ಪ್ರಮಾಣ ಪತ್ರಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ (ಮೀಸಲಾತಿ ಕೋರಿದ್ದಲ್ಲಿ), ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ-1 ಮತ್ತು 2 ರಲ್ಲಿ (ಮೀಸಲಾತಿ ಕೋರಿದ್ದಲ್ಲಿ), ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ), ಯೋಜನಾ ನಿರಾಶ್ರಿತ ಪ್ರಮಾಣ ಪತ್ರ, ಇಲಾಖಾ ಅಭ್ಯರ್ಥಿಗಳು ಸೇವೆ ಸಲ್ಲಿಸುತ್ತಿರುವ ಬಗ್ಗೆ ಅವರು ಅರ್ಜಿ ಸಲ್ಲಿಸಲು ಆಕ್ಷೇಪಣೆ ಇಲ್ಲವೆಂಬ ಪ್ರಮಾಣ ಪತ್ರವನ್ನು ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಸ್ಥರಿಂದ ಪಡೆದುಕೊಂಡಿರಬೇಕು. ಮೀಸಲಾತಿ ಪ್ರಮಾಣ ಪತ್ರಗಳು ಚಾಲ್ತಿಯಲ್ಲಿರುವ ನಮೂನೆಗಳಲ್ಲಿಯೇ ಇರಬೇಕೆಂದು ಸ್ಪಷ್ಟಪಡಿಸಲಾಗಿದ್ದು, ಈ ನಮೂನೆಯನ್ನು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ವೆಬ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. www.bmtc.online-ap1.com/pdf/RESERVATION

ಕೆಎಸ್‌ಆರ್‌ಟಿಸಿಯಲ್ಲಿನ ಹುದ್ದೆಗಳ ನೇಮಕಾತಿಯು ನಿರ್ದಿಷ್ಟ ಪ್ರಾದೇಶಿಕ ಕಾರ್ಯಗಾರಗಳಿಗೆ ಸಂಬಂಧಿಸಿದ್ದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರು/ಹಾಸನ, ಬೆಂಗಳೂರು ಕೇಂದ್ರೀಯ, ರಾಮನಗರ, ಮಂಡ್ಯ, ಮೈಸೂರು ನಗರ ಸಾರಿಗೆ, ಮೈಸೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ತುಮಕೂರು, ಚಿಕ್ಕಮಗಳೂರು, ಮಂಗಳೂರು, ಪುತ್ತೂರು, ಶಿವಮೊಗ್ಗ , ಚಿತ್ರದುರ್ಗ ವಿಭಾಗಗಳ ವ್ಯಾಪ್ತಿಯಲ್ಲಿ ಬರುವ ಯಾವುದೇ ಘಟಕಗಳಿಗೆ ನಿಯೋಜಿಸಲಾಗುತ್ತದೆ. ಆದರೆ ಇತರೆ ಸಂಸ್ಥೆಗಳಾದ ವಾಯವ್ಯ, ಈಶಾನ್ಯ ಸಾರಿಗೆ ಸಂಸ್ಥೆ ಅಥವಾ ಬಿಎಂಟಿಸಿಗೆ ವರ್ಗಾವಣೆ ಪಡೆದುಕೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಅಧಿಸೂಚನೆಯಲ್ಲಿ ತಿಳಿಸಿರುವ ವೃತ್ತಿಯಲ್ಲದೆ ಬೇರೆ ವೃತ್ತಿಗಳಲ್ಲಿ ಐಟಿಐ ಮಾಡಿದವರ ವೃತ್ತಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅರ್ಜಿ ಶುಲ್ಕವನ್ನು ಸಾಮಾನ್ಯ, 2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳು 800 ರೂ. ಹಾಗೂ ಪ.ಜಾತಿ, ಪ.ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತ ಅಭ್ಯರ್ಥಿಗಳಿಗೆ 500 ರೂ. ಎಂದು ನಿಗದಿಪಡಿಸಲಾಗಿದೆ.

 

error: Content is protected !!

Join the Group

Join WhatsApp Group