20ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ- ವಿಷಪ್ರಾಶನ ಶಂಕೆ

(ನ್ಯೂಸ್ ಕಡಬ) newskadaba.com ಜು. 02. ಇತ್ತೀಚೆಗಷ್ಟೇ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳ ಸಾವಿನ ಪ್ರಕರಣದ ಬೆನ್ನಲ್ಲೇ ಇದೀಗ 20ಕ್ಕೂ ಹೆಚ್ಚು ಕೋತಿಗಳ ಮಾರಣ ಹೋಮ ನಡೆದಿರುವುದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಂದೇಗಾಲ ಕೊಡಸೋಗೆ ಬಳಿ ಬೆಳಕಿಗೆ ಬಂದಿದೆ.

ರಸ್ತೆಯಲ್ಲಿ ರಾಶಿ ರಾಶಿ ವಾನರಗಳ ಕಳೇಬರಗಳು ಬಿದ್ದಿದ್ದು, ವಿವಿಧೆಡೆಗಳಲ್ಲಿ ಸೆರೆ ಹಿಡಿದ ಕೋತಿಗಳಿಗೆ ವಿಷವಿಕ್ಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.

ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಕೋತಿಗಳನ್ನು ಗಮನಿಸಿದ ಸ್ಥಳೀಯರು ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿ ತನಿಕೆ ಕೈಗೊಂಡಿದ್ದಾರೆ.

Scroll to Top