ಗ್ರಾಮ ಸಭೆ ನಡೆಸಲು ಪುತ್ತೂರು ತಾಲೂಕು ಪಂಚಾಯತ್ ಸೂಚನೆ



(ನ್ಯೂಸ್ ಕಡಬ) newskadaba.com ಜು. 02. ಪುತ್ತೂರು ತಾಲೂಕು ಪಂಚಾಯತ್  2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ವಾರ್ಡ್ ಸಭೆ ಮತ್ತು ಗ್ರಾಮ ಸಭೆಯ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ ಜನ ಪ್ರತಿನಿಧಿಗಳಿಗೆ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ.
ಅನಿವಾರ್ಯ ಕಾರಣಗಳಿಂದ ನಿಗದಿಪಡಿಸಿದ ದಿನಾಂಕದಂದು ಗ್ರಾಮ ಸಭೆಯನ್ನು ನಡೆಸಲು ಅಸಾಧ್ಯವಾದಲ್ಲಿ ಬದಲಿ ಗ್ರಾಮ ಸಭೆಯ ದಿನಾಂಕವನ್ನು ನಿಗದಿಪಡಿಸುವಾಗ ಸಂಬಂಧಪಟ್ಟ ಹೋಬಳಿಯಲ್ಲಿ ಗ್ರಾಮ ಸಭೆಗಳು ಪೂರ್ವ ನಿಗದಿಯಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಿ, ತದನಂತರ ಗ್ರಾಮ ಸಭೆ ದಿನಾಂಕವನ್ನು ನಿಗದಿಪಡಿಸುವ ಕುರಿತು ತಾಲೂಕು ಮಟ್ಟದ ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಗಳಿಗೆ ತಿಳಿಸಬೇಕು. ಗ್ರಾಮ ಸಭೆಯ ಒಂದು ತಿಂಗಳ ಮುಂಚಿತವಾಗಿ ವಾರ್ಡ್ ಸಭೆಯನ್ನು ನಡೆಸಲು ಸೂಚಿಸಲಾಗಿದೆ.







ನೇಮಕಗೊಂಡ ಮಾರ್ಗದರ್ಶಿ ಅಧಿಕಾರಿಗಳು ಗ್ರಾಮಸಭೆಯನ್ನು ನಡೆಸಿ, ಪೂರಕ ದಾಖಲೆಯೊಂದಿಗೆ 15 ದಿನಗಳೊಳಗಾಗಿ ಪುತ್ತೂರು ತಾಲೂಕು ಪಂಚಾಯತ್ ಕಚೇರಿಗೆ ವರದಿ ಸಲ್ಲಿಸಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ/ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ ಎಂದು ಪುತ್ತೂರು ತಾಲೂಕು ಪಂಚಾಯತ್  ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






error: Content is protected !!
Scroll to Top